ಪಾಕ್ ಸ್ವಾತಂತ್ರ್ಯ ದಿನಕ್ಕೆ ಶುಭಾ ಕೋರಿದ ವ್ಯಕ್ತಿಗೆ ಹಿಗ್ಗಾ ಮುಗ್ಗಾ ಜಾಡಿಸಿದ ಸಾನಿಯಾ!
ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಟ್ವೀಟ್ ಮಾಡಿ ಶುಭ ಕೋರಿದ ವ್ಯಕ್ತಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ...
ನವದೆಹಲಿ: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಟ್ವೀಟ್ ಮಾಡಿ ಶುಭ ಕೋರಿದ ವ್ಯಕ್ತಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಆಗಸ್ಟ್ 14ರಂದು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ಸಾನಿಯಾಗೆ ಸ್ವಾತಂತ್ರ್ಯೋತ್ಸವದ ಶುಭಾಷಯಗಳು. ನಿಮ್ಮ ಸ್ವಾತಂತ್ರ್ಯ ದಿನ ಇಂದೇ ಅಲ್ಲವೇ? ಎಂದು ಟ್ವೀಟ್ ಮಾಡಿದ್ದಾನೆ.
ಇದಕ್ಕೆ ಸಾನಿಯಾ ಮಿರ್ಜಾ, ಅಲ್ಲ, ನಾನು ಮತ್ತು ನನ್ನ ದೇಶದ ಜನತೆ ಸ್ವಾತಂತ್ರ್ಯ ದಿನವನ್ನು ನಾಳೆ(ಆಗಸ್ಟ್ 15) ಆಚರಿಸುತ್ತೇವೆ. ಇಂದು (ಆಗಸ್ಟ್ 14) ನನ್ನ ಪತಿ ಹಾಗೂ ಅವರ ದೇಶದವರು ಸ್ವಾತಂತ್ರ್ಯ ದಿನ ಆಚರಣೆ ಮಾಡುತ್ತಾರೆ. ಹಾಗೆಯೇ ನೀವು ಯಾವಾಗ ಆಚರಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
Jee nahi.. mera aur mere country ka Independence Day kal hai, aur mere husband aur unnki country ka aaj!! Hope your confusion is cleared !!Waise aapka kab hai?? Since you seem very confused .. https://t.co/JAmyorH0dV