ಇಂದಿನಿಂದ 18ನೇ ಏಷ್ಯನ್ ಕ್ರೀಡಾಕೂಟ: ಪದಕ ಬೇಟೆಗೆ ಸಿದ್ದವಾದ ಭಾರತ

ಇಂಡೋನೇಷಿಯಾದ ಜಕಾರ್ತಾದಲ್ಲಿ ಇಂದಿನಿಂದ (ಶನಿವಾರ) ಪ್ರಾರಂಭವಾಗಲಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನವನ್ನು ನೀಡುವ ಭರವಸೆ ಹೊಂದಿದೆ.
ಇಂದಿನಿಂದ  18ನೇ ಏಷ್ಯನ್ ಕ್ರೀಡಾಕೂಟ: ಪದಕ ಬೇಟೆಗೆ ಸಿದ್ದವಾದ ಭಾರತ
ಇಂದಿನಿಂದ 18ನೇ ಏಷ್ಯನ್ ಕ್ರೀಡಾಕೂಟ: ಪದಕ ಬೇಟೆಗೆ ಸಿದ್ದವಾದ ಭಾರತ
ಜಕಾರ್ತಾ(ಇಂಡೋನೇಷಿಯಾ): ಇಂಡೋನೇಷಿಯಾದ ಜಕಾರ್ತಾದಲ್ಲಿ ಇಂದಿನಿಂದ (ಶನಿವಾರ) ಪ್ರಾರಂಭವಾಗಲಿರುವ 18ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನವನ್ನು ನೀಡುವ ಭರವಸೆ ಹೊಂದಿದೆ.
ಏಷ್ಯನ್ ಕ್ರೀಡಾಕೂಟ ಪ್ರಾರಂಭವಾದಂದಿನಿಂದಲೂ ಭಾರತ ಪಾಲ್ಗೊಳ್ಳುತ್ತಿರುವ ಕಾರಣ  ಇದು ಭಾರತದ ಪಾಲಿಗೆ 18ನೇ ಕೂಟವಾಗಿದೆ.
ಏಷ್ಯನ್ ಕ್ರೀಡಾಕೂಟದ ಒಟ್ಟು 40 ವಿಭಾಗಗಳಲ್ಲಿ ಭಾರತ 34 ವಿಭಾಗಗಳಲ್ಲಿ ಸ್ಪರ್ಧಿಸಲಿದೆ.. ಭಾರತದ 543 ಕ್ರೀಡಾಪಟುಗಳು ಜಕಾರ್ತಾ ಮತ್ತು ಪಾಲೆಂಬಂಗ್ ನಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಬೇಸ್ ಬಾಲ್, ಫುಟ್ಬಾಲ್, ಜೆಟ್ ಸ್ಕೀ, ಆಧುನಿಕ ಪೆಂಟಾಥ್ಲಾನ್, ರಗ್ಬಿ ಸೆವೆನ್ಸ್ ಮತ್ತು ಟ್ರೈಯಾಥ್ಲಾನ್ಗಳಲ್ಲಿ ಭಾರತ ಭಾಗವಹಿಸುವುದಿಲ್ಲ.
2014ರಲ್ಲಿ ದಕ್ಷಿಣ ಕೊರಿಯಾದ ಇಂಚಿಯೋನ್ ನಲ್ಲಿ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ 11 ಚಿನ್ನ, 9 ಬೆಳ್ಳಿ ಮತ್ತು 37 ಕಂಚಿನ ಪದಕ.ಸೇರಿದಂತೆ 57 ಪದಕ ಗಳಿಸಿತ್ತು.
ಕುಸ್ತಿ, ಬ್ಯಾಡ್ಮಿಂಟನ್, ಶೂಟಿಂಗ್, ಬಾಕ್ಸಿಂಗ್ ಮತ್ತು ಜಿಮ್ನಾಸ್ಟಿಕ್ ನಲ್ಲಿ ಭಾರತ  ಪದಕಗಳನ್ನು ಗೆಲ್ಲುವ ವಿಶ್ವಾಸ ಹೊಂದಿದೆ.
ಏಷ್ಯನ್ ಕ್ರೀಡಾಕೂಟ ಕಿರುಪರಿಚಯ
ಏಷ್ಯನ್ ಕ್ರೀಡಾಕೂಟ ಅಥವಾ ಏಷ್ಯಾಡ್ ಎಂದೂ ಕರೆಯಲಾಗುವ ಬಹು-ಕ್ರೀಡೆಗಳ ಕ್ರೀಡಾಕೂಟವು ನಾಲ್ಕು ವರ್ಷಕ್ಕೊಮ್ಮೆ ಏಷ್ಯಾದ ಎಲ್ಲಾ ದೇಶಗಳ ಕ್ರೀಡಾಪಟುಗಳ ನಡುವೆ ಆಡಲಾಗುತ್ತದೆ. 
ಏಷ್ಯನ್ ಕ್ರೀಡಾಕೂಟವು ಭಾರತದ ನವದೆಹಲಿಯ ಮೊದಲ ಕ್ರೀಡಕೂಟದಿಂದ 1978ರ ಕ್ರೀಡಾಕೂಟದ ತನಕ ಏಷ್ಯನ್ ಗೇಮ್ಸ್ ಫೆಡೆರೆಷನ್‌ನಿಂದ ನಡೆಸಲ್ಪಡುತ್ತಿತ್ತು. 1982ರ ಕ್ರೀಡಕೂಟದಿಂದ ಒಲಂಪಿಕ್ ಕೌನ್ಸಿಲ್ ಆಫ್ ಏಷ್ಯಾ ದಿಂದ ಆಯೋಜಿಸಲ್ಪಡಲಾಗುತ್ತಿದೆ. 
ಈ ಕ್ರೀಡಾಕೂಟವು ಅಂತರಾಷ್ಟ್ರೀಯ ಒಲಂಪಿಕ್ ಕಮಿಟಿಯಿಂದ ಮಾನ್ಯತೆ ಪಡೆದಿದ್ದು, ಒಲಂಪಿಕ್ ಕ್ರೀಡಾಖೂಟದ ನಂತರ, ಅತಿ ದೊಡ್ಡ ಬಹು-ಕ್ರೀಡೆಗಳ ಕ್ರೀಡಾಕೂಟವಾಗಿದೆ.
ಇದುವರೆಗೂ 9 ದೇಶಗಳು ಆತಿಥ್ಯವನ್ನು ವಹಿಸಿಕೊಂಡಿವೆ. ಇಸ್ರೇಲ್ಅನ್ನು ಹೊರತು ಪಡಿಸಿ, ಈವರೆಗೂ 46 ರಾಷ್ಟ್ರಗಳು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಿವೆ. ಕಳೆದ ಕ್ರೀಡಕೂಟವು ಸೌತ್ ಕೊರಿಯಾದ ಇಂಚಿಯಾನ್ ನಗರದಲ್ಲಿ ಸೆಪ್ಟಂಬರ್ 19ರಿಂದ ಅಕ್ಟೋಬರ್ 4  2014ರವರೆಗೆ ನಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com