ಜಕಾರ್ತ: 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಟೇಬಲ್ ಟೆನ್ನಿಸ್ ನಲ್ಲಿ ಭಾರತದ ಪುರುಷರ ತಂಡ ಮೊದಲ ಬಾರಿ ಕಂಚಿನ ಪದಕ ಗೆಲ್ಲುವ ಮೂಲಕ ದಾಖಲೆ ಬರೆದಿದೆ..ಇಂದು ದಕ್ಷಿಣ ಕೊರಿಯಾ ವಿರುದ್ಧ ನಡೆದ ಸೆಮಿಫೈನಲ್ ನಲ್ಲಿ 0-3 ಅಂತರದಿಂದ ಭಾರತದ ತಂಡ ಸೋಲು ಅನುಭವಿಸಿತು. .ಜಿ ಸತ್ಯನ್, ಅಚಂತ್ ಶರತ್ ಕಮಲ್ ಹಾಗೂ ಆಂಥೋನಿ ಅಮಲ್ ರಾಜ್ ಅವರನ್ನು ಒಳಗೊಂಡ ತಂಡ ಕೊರಿಯಾ ವಿರುದ್ಧ ಸೋಲುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡಿತು..ಕ್ವಾರ್ಟರ್ ಫೈನಲ್ ನಲ್ಲಿ ಜಪಾನ್ ವಿರುದ್ಧ 1-3ರಿಂದ ಭರ್ಜರಿ ಜಯಗಳಿಸುವ ಮೂಲಕ ಭಾರತ ತಂಡ ಸೆಮಿಫೈನಲ್ ಪ್ರವೇಶಿಸಿತ್ತು..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics