ನವದೆಹಲಿ: ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಸುಲ್ತಾನ್ ಅಜ್ಲಾನ್ ಷಾ ಕಪ್ ಟೂರ್ನಿ ರಾಷ್ಟ್ರೀಯ ಕ್ಯಾಂಪ್ ಗೆ 33 ಆಟಗಾರರನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿದೆ.
ನ್ಯೂಜಿಲ್ಯಾಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಹಾಕಿ ತಂಡದಲ್ಲಿ ನಾಲ್ವರು ಕಿರಿಯ ಆಟಗಾರರನ್ನು ಪರೀಕ್ಷಿಸಲಾಗಿತ್ತು ಇವರೆಲ್ಲಾ ಉತ್ತಮ ಪ್ರದರ್ಶನ ನೀಡಿದ್ದರಿಂದ ನಂತರ ಆ ನಾಲ್ವರು ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. ಇದೀಗ ಅವರು ರಾಷ್ಟ್ರೀಯ ಶಿಬಿರದಲ್ಲಿ ಸೇರಿಕೊಂಡಿದ್ದಾರೆ.
ಮಾರ್ಚ್ 3ರಿಂದ ಮಾರ್ಚ್ 10ರವರೆಗೆ ಪ್ರತಿಷ್ಠಿತ 27ನೇ ಸುಲ್ತಾನ್ ಅಜ್ಲಾನ್ ಷಾ ಕಪ್ ಟೂರ್ನಿ ನಡೆಯಲಿದೆ. ಇದಾದ ನಂತರ ಏಪ್ರಿಲ್ 4ರಿಂದ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಆಟಗಾರರಿಗೆ ಕನಿಷ್ಠ ಅಭ್ಯಾಸ ನೀಡಲಾಗುತ್ತದೆ.