ವಿಶ್ವ ಮೆಮೊರಿ ಚಾಂಪಿಯನ್ ಶಿಪ್ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಅತಿ ಕಿರಿಯ ಭಾರತೀಯ ಮಹಿಳೆ

ಚೀನಾದಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ ಆಫ್ ಮೆಮರಿ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಭಾರತೀಯ ಮಹಿಳೆಯಾಗಿ ಹೊರಹೊಮ್ಮುವ ಮೂಲಕ.........
ವೈಷ್ಣವಿ ಯರ್ಲಂಗಡ
ವೈಷ್ಣವಿ ಯರ್ಲಂಗಡ
ಹೈದರಾಬಾದ್: ಚೀನಾದಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ ಆಫ್ ಮೆಮರಿ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಭಾರತೀಯ ಮಹಿಳೆಯಾಗಿ ಹೊರಹೊಮ್ಮುವ ಮೂಲಕ ವೈಷ್ಣಿನಿ ಯರ್ಲಂಗಡ ಮಹಿಳೆಯರು, ಯುವ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ.
ಈ ಹಿಂದೆ 2016ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಂದ 100 ಅಗ್ರ ಮಹಿಳಾ ಸಾಧಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ವೈಷ್ಣವಿ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.  ತನ್ನಲ್ಲಿರುವ ಕೌಶಲ್ಯವನ್ನು ಇತರರಿಗೆ ಕಲಿಸುವುದಕ್ಕಾಗಿ ತರಬೇತಿ ಸಂಸ್ಥೆಯನ್ನು ಪ್ರಾರಂಭಿಸಬೇಕು ಎನ್ನುವುದು ಆವರ ಗುರಿ ಎಂದು ಎಎನ್ ಐ ಸುದ್ದಿಉಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ವೈಷ್ಣವಿ ಹೇಳಿದ್ದಾರೆ.
"ನಾನು ಹೊಂದಿರುವ ಕೌಶಲ್ಯವನ್ನು ಯುವಪೀಳಿಗೆ, ವಿದ್ಯಾರ್ಥಿಗಳಿಗೆ ಕಲಿಸುವಂತಹ ಸಂಸ್ಥೆಯನ್ನು ಸ್ಥಾಪಿಸುವುದು ನನ್ನ ಗುರಿ. ಅವರು ಸಾಮಾನ್ಯ ಪಠ್ಯಕ್ರಮದಿಂದ ಹೊರತಾದ ಏನನ್ನಾದರೂ ಕಲಿಯಬಹುದಾಗಿದೆ. ರಾಷ್ಟ್ರಪತಿಗಳ ಗೌರವವನ್ನು ಹೊರತುಪಡಿಸಿದರೆ ಸರ್ಕಾರದಿಂದ ನನಗೆ ಯಾವುದೇ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಇದೇಕೆ ಹೀಗಾಗಿದೆ ಎನ್ನುವುದನ್ನು ನಾನು ಹೇಳಲಾರೆ. ಆದರೆ ನನ್ನ ಪೋಷಕರು ಎಂದಿಗೂ ನನ್ನ ಬೆಂಬಲಕ್ಕಿದ್ದಾರೆ.  ಈ ಕ್ಷೇತ್ರಕ್ಕೆ ಆಗಮಿಸಲು ಇಚ್ಚಿಸುವವರು ಯಾರೇ ಆದರೂ ನೀವೇ ನಂಬಿಕೆಯಿಂದ ಮುಂದುವರಿಯಿರಿ. ಆಗ ನಿಮಗೆ ತಾನೇತಾನಾಗಿ ಬೆಂಬಲ ಸಿಗುತ್ತದೆ. " ವೈಷ್ಣವಿ ಹೇಳಿದ್ದಾರೆ.
ಈ ಸ್ಪರ್ಧೆಯುಲ್ಲಿ ವೈವಿದ್ಯಗಳಿದ್ದು ವಿಶೇಷವಾಗಿ ಮುಖವನ್ನು ನೆನಪಿನಲ್ಲಿರಿಸಿಕೊಳ್ಳುವುವು, ದಿನಾಂಕಗಳನ್ನು ನೆನಪಿನಲ್ಲಿರಿಸಿಕೊಳ್ಳುವುದು ಇಂತಹಾ ಅನೇಕ ಮಾದರಿ ಚಟುವಟಿಕೆಗಳು ಇರುತ್ತದೆ ಎಂದು ಅವರು ತಾವು ಭಾಗವಹಿಸಿದ್ದ ಸ್ಪರ್ಧೆಯ ಕುರಿತಾಗಿ ವಿವರಿಸಿದರು. "ಒಂದು ಸುತ್ತಿನಲ್ಲಿ ಯಾರು ಹೆಚ್ಚು ಪ್ರಶ್ನೆಗಳಿಗೆ ತಮ್ಮ ನೆನಪಿನ ಶಕ್ತಿಯಿಂದ ಉತ್ತರಿಸುತ್ತಾರೆಯೋ ಅವರು ಆ ಸುತ್ತಿನ ವಿಜೇತರಾಗುತ್ತಾರೆ. ಹಾಗೆ ಎಲ್ಲಾ ಸುತ್ತಿನಲ್ಲಿ ಗೆದ್ದು ಅತಿ ಹೆಚ್ಚು ನೆನಪಿನ ಶಕ್ತಿ ಪ್ರದರ್ಶಿಸಿದವರು ಈ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುತ್ತಾರೆ.
"ನಾನು 15 ವರ್ಷದವಳಿದ್ದಾಗ ಮೊದಲ ಬಾರಿಗೆ ಮೆಮೊರಿ ಚಾಂಪಿಯನ್ ಶಿಪ್ ವಿಜೇತಳಾಗಿದ್ದೆ. ಇತ್ತೀಚೆಗೆ ನಾನು ಭಾರತವನ್ನು ಪ್ರತಿನಿಧಿಸುವ ವಿಶ್ವ ಮೆಮೊರಿ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದ್ದಿದ್ದೆನು." ವೈಷ್ಣವಿ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಅತಿ ಕಿರಿಯ ಭಾರತೀಯ ಮಹಿಳೆ ಎನಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com