ವಿಂಬಲ್ಡನ್ 2018: ಮಹಿಳೆಯ ಸಿಂಗಲ್ಸ್ ನ ಫೈನಲ್ ಪ್ರವೇಶಿಸಿದ ಸೆರೆನಾ ವಿಲಿಯಮ್ಸ್, ದಾಖಲೆ ನಿರ್ಮಾಣ

ಬ್ರಿಟನ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಫೈನಲ್ ಪ್ರವೇಶಿಸಿದ್ದಾರೆ.
ಸೆರೆನಾ ವಿಲಿಯಮ್ಸ್
ಸೆರೆನಾ ವಿಲಿಯಮ್ಸ್
ಲಂಡನ್: ಬ್ರಿಟನ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಫೈನಲ್ ಪ್ರವೇಶಿಸಿದ್ದಾರೆ.
ಲಂಡನ್ ನಲ್ಲಿ ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಜರ್ಮನಿಯ ಜೂಲಿಯಾ ಜಾರ್ಜಸ್ ವಿರುದ್ಧ 6-2, 6-4 ನೇರ ಸೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಪೈನಲ್ ಪ್ರವೇಶ ಮಾಡಿದರು. ಸೆರೆನಾಗೆ ಇದು 30ನೇ ವಿಂಬಲ್ಟನ್ ಫೈನಲ್ ಪ್ರವೇಶವಾಗಿದೆ. ಇನ್ನು 23 ಬಾರಿಯ ಚಾಂಪಿಯನ್ ಸೆರೆನಾ ಟೆನ್ನಿಸ್ ಲೋಕದ ಸಾರ್ವಕಾಲಿಕ ದಾಖಲೆ ಬರೆದಿದ್ದ ಆಸ್ಚ್ರೇಲಿಯಾದ ಮಾರ್ಗರೇಟ್ ಕೋರ್ಟ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. 
ಸೆರೆನಾ ವಿಲಿಯಮ್ಸ್ ಒಟ್ಟು 8 ಆಸ್ಚ್ರೇಲಿಯನ್ ಓಪನ್, ರೊಲ್ಯಾಂಡ್ ಗಾರೋಸ್ 4, ವಿಂಬಲ್ಡನ್ 10 ಮತ್ತು ಅಮೆರಿಕ ಓಪನ್ ನ 8 ಟೂರ್ನಿಗಳಲ್ಲಿ ಫೈನಲ್ ಪ್ರವೇಶ ಮಾಡಿ ಈ ದಾಖಲೆ ನಿರ್ಮಾಣ ಮಾಡಿದ್ದಾರೆ. 
ಇನ್ನು ಫೈನಲ್ ನಲ್ಲಿ ಸೆರೆನಾ ವಿಲಿಯಮ್ಸ್ ಮತ್ತೋರ್ವ ಜರ್ಮನ್ ಆಟಗಾರ್ತಿ ಏಂಜೆಲಿಕ್ ಕೆರ್ಬರ್ ಅವರನ್ನು ಎದುರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com