ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪುತ್ತೂರು ಬಾಲಕಿಗೆ ಬೆಳ್ಳಿ, ಕಂಚಿನ ಪದಕ

ಪುತ್ತೂರಿನ ಈಜು ಪಟು ಮೋನ್ಯಾ ಕೌಸುಮಿ (8) ತಮ್ಮ ಮೊದಲ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಪದಕಗಳನ್ನು ಗೆದ್ದಿದ್ದಾರೆ.

ಕ್ರೀಡಾಕೂಟದಲ್ಲಿ ರಿಲೇ ಸ್ಪರ್ಧೆಯನ್ನು ಗೆಲ್ಲುವುದಕ್ಕೂ ಸಹ ರಾಜ್ಯ ತಂಡಕ್ಕೆ ಮೋನ್ಯಾ ಕೌಸುಮಿ ನೆರವಾಗಿದ್ದಾರೆ. 35 ನೇ ಸಬ್ ಜೂನಿಯರ್ ಹಾಗೂ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ ನಲ್ಲಿ ಮೋನ್ಯಾ 4x50 ಮೆಡ್ಲಿ ರಿಲೆಯಲ್ಲಿ ಕಂಚಿನ ಪದಕ ಹಾಗೂ 4x 50 ಮೀಟರ್ ಫ್ರೀಸ್ಟೈಲ್ ರಿಲೇಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಫ್ರೀಸ್ಟೈಲ್ ರಿಲೇಯಲ್ಲಿ 4 ನೇ ಸ್ಥಾನದಲ್ಲಿದ್ದ ಕರ್ನಾಟಕ ತಂಡವನ್ನು 33.6 ಸೆಕೆಂಡ್ಸ್ ಅಂತರದಲ್ಲಿ 2 ನೇ ಸ್ಥಾನಕ್ಕೇರಿಸಿ ಪದಕ ಗೆಲ್ಲಲು ನೆರವಾಗಿದ್ದಾರೆ. ಇದಕ್ಕೂ ಮುನ್ನ ಮೈಸೂರಿನಲ್ಲಿ ನಡೆದ ಸಬ್ ಜೂನಿಯರ್ ಹಾಗೂ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ ನ 50 ಫ್ರೀಸ್ಟೈಲ್ ರಿಲೇಯಲ್ಲಿ ಗೆದ್ದು ಮೋನ್ಯಾ ಅಚ್ಚರಿ ಮೂಡಿಸಿದ್ದರು. ಈ ಮೂಲಕ ಪುತ್ತೂರು ಅಕ್ವಾಟಿಕ್ ಕ್ಲಬ್ ನಿಂದ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾದ ಅತಿ ಕಿರಿಯ ಈಜುಪಟು ಎಂಬ ಹೆಗ್ಗಳಿಕೆಗೆ ಮೋನ್ಯಾ ಕೌಸುಮಿ ಪಾತ್ರರಾಗಿದ್ದರು.

ಕಮಲ್-ರಹಾನಿ ಪುತ್ರಿಯಾಗಿರುವ ಮೋನ್ಯಾ ಪುತ್ತೂರಿನ ಸೇಂಟ್ ಫಿಲೋಮಿನಾ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ 4 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ಕೋಚ್ ಪಾರ್ಥ ವಾರಾಣಸಿ, ನಿರೂಪ್, ರೋಹಿತ್, ಸತ್ಯ ತರಬೇತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com