ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ದಾಖಲೆಯ 6ನೇ ಚಿನ್ನದ ಪದಕ ಗೆದ್ದ ಮೇರಿ ಕೋಮ್

ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬಾಕ್ಸಿಂಗ್‌ ತಾರೆ ಎಂ.ಸಿ. ಮೇರಿ ಕೋಮ್‌ ಅವರು ಶನಿವಾರ ದಾಖಲೆಯ ಆರನೇಯ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಮೇರಿ ಕೋಮ್
ಮೇರಿ ಕೋಮ್
ನವದೆಹಲಿ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬಾಕ್ಸಿಂಗ್‌ ತಾರೆ ಎಂ.ಸಿ. ಮೇರಿ ಕೋಮ್‌ ಅವರು ಶನಿವಾರ ದಾಖಲೆಯ ಆರನೇಯ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಇಂದು ನಡೆದ 48 ಕೆಜಿ ಲೈಟ್‌ ಫ್ಲೈವೇಟ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಉಕ್ರೇನ್ ನ ಎಚ್ ಓಕೋಟೊ ವಿರುದ್ಧ 5-0 ಅಂತರದ ಗೆಲುವು ಸಾಧಿಸುವ ಮೂಲಕ ಆರು ಬಾರಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ವಿಶ್ವದ ಮೊದಲ ಬಾಕ್ಸಿಂಗ್ ತಾರೆ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.
ಕಳೆದ ಗುರುವಾರ ಸೆಮಿ ಫೈನಲ್ ನಲ್ಲಿ ಉತ್ತರ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರನ್ನು ಪರಾಜಿತಗೊಳಿಸುವ ಮೂಲಕ 35 ವರ್ಷದ ಮೇರಿ ಕೋಮ್ ಫೈನಲ್ಸ್ ಪ್ರವೇಶಿಸಿದ್ದರು. 
ಮೋರಿ ಕೋಮ್ ಈ ಹಿಂದೆ ಐದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕದೊಡನೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿ ಮಿಂಚಿದ್ದರು.
ಮೋರಿ ಕೋಮ್‌ 2010ರಲ್ಲಿ ಕೊನೆಯದಾಗಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ ಶಿಪ್ ನಲ್ಲಿ ಚಿನ್ನ ಗೆದ್ದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com