ಯೂತ್ ಒಲಂಪಿಕ್ಸ್: ಭಾರತ ಪುರುಷ, ಮಹಿಳಾ ಹಾಕಿ ತಂಡಗಳಿಗೆ ಬೆಳ್ಳಿ!

ಯೂತ್ ಒಲಂಪಿಕ್ಸ್ ನಲ್ಲಿ ಬಾರತದ ಪದಕ ಬೇಟೆ ಮುಂದುವರಿದಿದು ಪುರುಷ ಹಾಗೂ ಮಹಿಳಾ ಹಾಕಿ ಸ್ಪರ್ಧೆಗಳಲ್ಲಿ ಬಾರತ ತಂಡ ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಪುರುಷರ ಹಾಕಿ ತಂಡ
ಪುರುಷರ ಹಾಕಿ ತಂಡ
ಬ್ಯೂನಸ್ ಐರಿಸ್: ಯೂತ್ ಒಲಂಪಿಕ್ಸ್ ನಲ್ಲಿ ಬಾರತದ ಪದಕ ಬೇಟೆ ಮುಂದುವರಿದಿದು ಪುರುಷ ಹಾಗೂ ಮಹಿಳಾ ಹಾಕಿ ಸ್ಪರ್ಧೆಗಳಲ್ಲಿ ಬಾರತ ತಂಡ ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಭಾನುವಾರ ನಡೆದ ಪುರುಷರ ಹಾಕಿ ಫೈನಲ್ಸ್ ನಲ್ಲಿ ಮಲೇಷಿಯಾ ವಿರುದ್ಧ ಭಾರತ 2-4 ಅಂತರದಿಂದ ಸೋತು ರಜತ ಪದಕ ಗಳಿಸಿದೆ.
ಭಾರತ ಪರವಾಗಿ ನಾಯಕ ವಿವೇಕ್ ಸಾಗರ್ (2ನೇ ನಿಮಿಷ) ಹಾಗೂ 5ನೇ ನಿಮಿಷ) ಎರಡು ಗೋಲುಗಳನ್ನು ದಾಖಲಿಸಿ ಗೆಲುವಿನ ಭರವಸೆ ಮುಡಿಸಿದ್ದರು ಆದರೆ ಮಲೇಷಿಯಾದ ಪ್ರಬಲ ಪೈಪೋಟಿಯ ಕಾರಣ ಪಂದ್ಯದ ಕಡೆವರೆಗೆ ಭಾರತಕ್ಕೆ ಮತ್ತೆ ಗೋಲು ಗಳಿಸಲಾಗಲಿಲ್ಲ. 
ಮಲೇಷಿಯಾ ಪರವಾಗಿ ಫಿರಾದಸ್ ರೋಸ್ಕಿ, ಅಖಿಮುಲ್ಲಾ ಅನೌರ್, ಅಮೀರುಲ್ ಅಜಹರ್ ಗೋಲು ಗಳಿಸಿದ್ದರು.
ಇನ್ನು ಮಹಿಳಾ ವಿಭಾಗದ ಪಂದ್ಯದಲ್ಲಿ ಭಾರತ ತಂಡ ಅರ್ಜೆಂಟೀನಾ ವಿರುದ್ಧ 1-3 ಅಂತರದಿಂದ ಪರಾಭವಗೊಂಡು ಚಿನ್ನದ ಪದಕವನ್ನು ಕೈಚೆಲ್ಲಿದೆ.
ಭಾರತ ಪರ ಪಂದ್ಯದ ಮೊದಲ ನಿಮಿಷದಲ್ಲಿ ಸುಮ್ರಾಜ್ ಖಾನ್ ಗಳಿಸಿದ್ದೇ ಏಕಕಿಕ ಗೋಲಾಗಿತ್ತು.
ಇನ್ನು ಹಾಕಿ ಪುರುಷರ ವಿಭಾಗದಲ್ಲಿ ಅರ್ಜೆಂಟೀನಾ ಹಾಗೂ ಮಹಿಳಾ ವಿಭಾಗದಲ್ಲಿ ಚೀನಾ ಕಂಚಿನ ಪದಕದ ಸಾಧನೆ ಮೆರೆದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com