ಫೈನಲ್ ಪಂದ್ಯ ರದ್ದು: ಜಂಟಿಯಾಗಿ ಏಷ್ಯಾ ಚಾಂಪಿಯನ್ ಟ್ರೋಪಿ ಗೆದ್ದ ಬಾರತ-ಪಾಕ್!

ಓಮನ್ ನ ಮಸ್ಕತ್ ನಲ್ಲಿ ನಡೆದ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಅಂತಿಮ ಸುತ್ತಿನ ಪಂದ್ಯ ಅನಾನುಕೂಲಕರವಾಗಿದ್ದ ಹವಾಮಾನದ ಕಾರಣ ರದ್ದಾಗಿದ್ದು....
ಫೈನಲ್ ಪಂದ್ಯ ರದ್ದು: ಜಂಟಿಯಾಗಿ ಏಷ್ಯಾ ಚಾಂಪಿಯನ್ ಟ್ರೋಪಿ ಗೆದ್ದ ಬಾರತ-ಪಾಕ್!
ಫೈನಲ್ ಪಂದ್ಯ ರದ್ದು: ಜಂಟಿಯಾಗಿ ಏಷ್ಯಾ ಚಾಂಪಿಯನ್ ಟ್ರೋಪಿ ಗೆದ್ದ ಬಾರತ-ಪಾಕ್!
ನವದೆಹಲಿ: ಓಮನ್ ನ ಮಸ್ಕತ್ ನಲ್ಲಿ ನಡೆದ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯ ಅಂತಿಮ ಸುತ್ತಿನ ಪಂದ್ಯ ಅನಾನುಕೂಲಕರವಾಗಿದ್ದ ಹವಾಮಾನದ ಕಾರಣ ರದ್ದಾಗಿದ್ದು ಫೈನಲ್ ಪ್ರವೇಶಿಸಿದ್ದ ಬಾರತ ಹಾಗೂ ಪಾಕಿಸ್ತಾನ ತಂಡಗಳು ಜಂಟಿ ವಿಜೇತ ತಂಡವೆಂದು ಘೋಷಿಸಲಾಗಿದೆ.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನದ ನಡುವೆ ರೋಚಕ ಫೈನಲ್ ಹಣಾಹಣಿ ನಡೆಯಬೇಕಾಗಿದ್ದು ಅನಿವಾರ್ಯ ಕಾರಣಗಳಿಂದಾಗಿ ಪಂದ್ಯ ರದ್ದಾಗಿದೆ. ಈ ಪರಿಣಾಮ ಐದನೇ ಆವೃತ್ತಿಯ ಏಷ್ಯನ್ ಚಾಂಪಿಯನ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಎರಡು ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗಿದೆ.
ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದಿದ್ದ ಬಾರತ 13 ಅಂಕ ಪಡೆದಿದ್ದರೆ ಪಾಕಿಸ್ತಾನ 10 ಅಂಕ ಗಳಿಸಿತ್ತು. ಲೀಗ್ ಹಂತದಲ್ಲಿ ಭಾರತ ಪಾಕಿಸ್ತಾನವನ್ನು  3-1 ಗೋಲುಗಳಿಂದ ಮಣಿಸಿದ್ದನ್ನು ನಾವಿಲ್ಲಿ ನೆನೆಯಬಹುದು.
ನವೆಂಬರ್ 28 ರಿಂದ ಡಿಸೆಂಬರ್ 16 ರವರೆಗೆ ಭುವನೇಶ್ವರ್ನಲ್ಲಿ ನಡೆಯಲಿರುವ ಎಫ್ಐಎಚ್ ಪುರುಷರ ವಿಶ್ವಕಪ್ ಪಂದ್ಯಾವಳಿಗೆ ಮುನ್ನ ಇದು ಭಾರತ್-ಪಾಕ್ ತಂಡಗಳಿಗೆ ಕಡೆಯ ಅಂತರಾಷ್ಟ್ರೀಯ ಪಂದ್ಯವಾಗಿತ್ತು.
ಒಟ್ಟಾರೆ ಭಾರತ ಹಾಗೂ ಪಾಕಿಸ್ತಾನಗಳು ತಲಾ ಎರಡು ಬಾರಿ ಏಷ್ಯಾ ಚಾಂಪಿಯನ್ ಕಿರೀಟ ಧರಿಸಿದೆ. ಭಾರತವು 2011 ಮತ್ತು 2016ರಲ್ಲಿ ಈ ಸಾಧನೆ ಮಾಡಿದ್ದರೆ ಪಾಕಿಸ್ತಾನ 2012 ಮತ್ತು 2013ರಲ್ಲಿ ಚಾಂಪಿಯನ್ ಆಗಿತ್ತು.ಅಲ್ಲದೆ ಭಾರತ 2012ರಲ್ಲಿ ಒಮ್ಮೆ ರನ್ನರ್ ಅಪ್ ಸ್ಥಾನ ಪಡೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com