ಜಾಗತಿಕ ಮಟ್ಟದಲ್ಲಿ ಇಂದು ಭಾರತದ ಕೀರ್ತಿ ಪತಾಕೆ ಹಾರಾಡುತ್ತಿದ್ದು ದೇಶದ ತಾಕತ್ತನ್ನು ಕಂಡ ಶತ್ರು ರಾಷ್ಟ್ರಗಳು ಒಳಗೊಳಗೆ ಕಂಪಿಸುತ್ತಿದ್ದಾರೆ. ನಿನ್ನೆ 70ನೇ ಗಣರಾಜ್ಯೋತ್ಸವ ಅದ್ಧೂರಿಯಾಗಿ ನಡೆದಿತ್ತು. ಇದಕ್ಕೆ WWE ಸೂಪರ್‌ಸ್ಟಾರ್ಸ್ ಗಳು ಶುಭಾಶಯ ಕೋರಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಡಬ್ಲ್ಯೂಡಬ್ಲ್ಯೂಇ ಸೂಪರ್ ಸ್ಟಾರ್ಸ್ ಗಳಾದ ಜಾನ್ ಸೀನಾ, ಎಜೆ ಸ್ಟೈಲಿಶ್, ಮುಸ್ತಾಫಾ ಅಲಿ ಸೇರಿದಂತೆ ಇತರರ 70ನೇ ಗಣರಾಜ್ಯೋತ್ಸವಕ್ಕೆ ದೇಶದ ಜನತೆಗೆ ಶುಭ ಕೋರಿದ್ದಾರೆ.
70ನೇ ಗಣರಾಜ್ಯೋತ್ಸವ ದಿನಾಚರಣೆಗೆ ವಿಶೇಷ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಮಫೊಸಾ ಆಗಮಿಸಿದ್ದರು.
ರಾಷ್ಟ್ರಪಿತ ಮೋಹನ್ ದಾಸ್ ಕರಮ್ ಚಂದ್ ಗಾಂಧಿ 'ಮಹಾತ್ಮ'ರಾಗಿ ರೂಪಾಂತರಗೊಂಡ ಚಿತ್ರದ ಸ್ತಬ್ಧಚಿತ್ರ ಗಣರಾಜ್ಯೋತ್ಸವದಲ್ಲಿ ಎಲ್ಲರ ಗಮನ ಸೆಳೆದವು.