ಶೂಟಿಂಗ್‌ ವಿಶ್ವಕಪ್‌: ಅಭೀಷೆಕ್ ವರ್ಮಾಗೆ ಸ್ವರ್ಣ

ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಅಭಿಷೇಕ್ ವರ್ಮಾ 10 ಮೀ ರೈಫಲ್‌ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

Published: 30th August 2019 07:39 PM  |   Last Updated: 30th August 2019 07:53 PM   |  A+A-


Abhishek Verma

ಅಭೀಷೆಕ್ ವರ್ಮಾಗೆ ಸ್ವರ್ಣ

Posted By : Srinivasamurthy VN
Source : PTI

ರಿಯೋ ಡಿ ಜನೈರೊ: ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಅಭಿಷೇಕ್ ವರ್ಮಾ 10 ಮೀ ರೈಫಲ್‌ ಪುರುಷರ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಅಭಿಷೇಕ್ ಅವರು ಫೈನಲ್ ಸುತ್ತಿನಲ್ಲಿ 244.4 ಅಂಕಗಳನ್ನು ಕಲೆ ಹಾಕಿದರು. ಇದೇ ಟೂರ್ನಿಯಲ್ಲಿ ಸಂಜೀವ್‌ ರಜಪೂತ್‌ ಅವರು 50 ಮೀ ರೈಫಲ್‌ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದು. ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಎಂಟನೇ ಭಾರತೀಯ ಶೂಟರ್ ಎಂಬ ಕೀರ್ತಿಗೆ ರಜಪೂತ್‌ ಭಾಜನರಾದರು.

38ರ ಪ್ರಾಯದ ರಜಪೂತ್‌ ಅವರು ಪ್ರಶಸ್ತಿ ಸುತ್ತಿನಲ್ಲಿ 462.0 ಅಂಕಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದರು. ಕ್ರೊವೇಷ್ಯಾದ ಪೀಟರ್‌ ಗೋರ್ಸಾ ಅವರು 462.2 ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಭಾಜನರಾದರು.

Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp