ಗಾಲ್ಫ್ ಸ್ಟಾರ್ ಆಟಗಾರ ಟೈಗರ್ ವುಡ್ಸ್ ಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ!

ಅಮೆರಿಕದ ಖ್ಯಾತ ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಗೆ ಅಮೆರಿಕದ ಅತ್ಯನ್ನತ ನಾಗರಿಕ ಪ್ರಶಸ್ತಿ 'ಪ್ರೆಸಿಡೆನ್ಶಿಯಲ್ ಅವಾರ್ಡ್ ಆಫ್ ಫ್ರೀಡಂ' ನೀಡಿ ಗೌರವಿಸಲಾಗಿದೆ.

Published: 07th May 2019 12:00 PM  |   Last Updated: 07th May 2019 08:55 AM   |  A+A-


US President Donald Trump Awards Presidential Medal Of Freedom To Golfer Tiger Woods

ಟೈಗರ್ ವುಡ್ಸ್ ಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿ

Posted By : SVN SVN
Source : Online Desk
ವಾಷಿಂಗ್ಟನ್: ಅಮೆರಿಕದ ಖ್ಯಾತ ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಗೆ ಅಮೆರಿಕದ ಅತ್ಯನ್ನತ ನಾಗರಿಕ ಪ್ರಶಸ್ತಿ 'ಪ್ರೆಸಿಡೆನ್ಶಿಯಲ್ ಅವಾರ್ಡ್ ಆಫ್ ಫ್ರೀಡಂ' ನೀಡಿ ಗೌರವಿಸಲಾಗಿದೆ. 

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ವೈಟ್‌ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೈಗರ್ ವುಡ್ಸ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಅಮೆರಿಕದ ಸಾಧಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅದರಂತೆ ಈ ಬಾರಿ ಗಾಲ್ಫ್ ಕ್ರೀಡೆಯ ಲೆಜೆಂಡ್ ಆಟಗಾರ ಟೈಗರ್ ವುಡ್ಸ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇನ್ನು ಅಮೆರಿಕದ ಅತ್ಯಂತ ಶ್ರೀಮಂತ ಕ್ರೀಡಾಪಟು ಎನಿಸಿಕೊಂಡಿರುವ ಟೈಗರ್ ವುಡ್ಸ್ ಅವರಿಗೆ ಆ ದೇಶದ ಮತ್ತೋರ್ವ ಶ್ರೀಮಂತ ಉದ್ಯಮಿ ಹಾಗೂ ಖುದ್ಧು ಗಾಲ್ಫ್ ಆಟಗಾರರಾಗಿರುವ ಡೊನಾಲ್ಡ್ ಟ್ರಂಪ್ ಪ್ರಶಸ್ತಿ ನೀಡಿ ಗೌರವಿಸಿದ್ದು ಮತ್ತೊಂದು ವಿಶೇಷವಾಗಿದೆ.
Stay up to date on all the latest ಕ್ರೀಡೆ news with The Kannadaprabha App. Download now
facebook twitter whatsapp