ತಲೆಮಾರಿನ ಪಂದ್ಯ: 1999ರಲ್ಲಿ ಅಪ್ಪ, 2019ರಲ್ಲಿ ಮಗನ ವಿರುದ್ಧ ಸೆಣಸುತ್ತಿರುವ ರೋಜರ್ ಫೆಡರರ್

ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ನಲ್ಲಿ ಇಂದು ಮಹತ್ವದ ಪಂದ್ಯವಿದ್ದು, 1999ರಲ್ಲಿ ಅಪ್ಪನ ವಿರುದ್ಧ ಸೆಣಿಸಿದ್ದ ಸ್ವಿಸ್ ಆಟಗಾರ ರೋಜರ್ ಫೆಡರರ್, ಇಂದು ಅದೇ ಸ್ಪರ್ಧಿಯ ಮಗನ ವಿರುದ್ಧ ಸೆಣಸಾಡಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ಯಾರಿಸ್: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ನಲ್ಲಿ ಇಂದು ಮಹತ್ವದ ಪಂದ್ಯವಿದ್ದು, 1999ರಲ್ಲಿ ಅಪ್ಪನ ವಿರುದ್ಧ ಸೆಣಿಸಿದ್ದ ಸ್ವಿಸ್ ಆಟಗಾರ ರೋಜರ್ ಫೆಡರರ್, ಇಂದು ಅದೇ ಸ್ಪರ್ಧಿಯ ಮಗನ ವಿರುದ್ಧ ಸೆಣಸಾಡಲಿದ್ದಾರೆ.
ಹೌದು.. ವಿಶ್ವದ ಮೂರನೇ ಶ್ರೇಯಾಂಕದ ಆಟಗಾರ ರೋಜರ್‌ ಫೆಡರರ್ ಅವರು ಫ್ರೆಂಚ್‌ ಓಪನ್‌ನಲ್ಲಿ 1999ರ ಪ್ರತಿಸ್ಪರ್ಧಿಯೊಬ್ಬರ ಮಗನ ವಿರುದ್ಧ ಶುಕ್ರವಾರ ಸೆಣಸಲಿದ್ದಾರೆ.  ಇಂದು ಫೆಡರರ್‌ ಅವರು ಫ್ರೆಂಚ್ ಓಪನ್‌ ಮೂರನೇ ಸುತ್ತಿನಲ್ಲಿ 1999ರ ಇದೇ ಟೂರ್ನಿಯ ಪ್ರತಿಸ್ಪರ್ಧಿ ಕ್ರಿಸ್ಟಿಯನ್ ಅವರ ಪುತ್ರ ಕ್ಯಾಸ್ಪರ್ ರುಡ್ ವಿರುದ್ಧ ಸೆಣಸಲಿದ್ದಾರೆ. 
1999ರಲ್ಲಿ ತನ್ನ 17ನೇ ವಯಸ್ಸಿನಲ್ಲಿ ಫೆಡರರ್‌ ಅವರು ಮೊದಲ ಬಾರಿಗೆ ಫ್ರೆಂಚ್‌ ಓಪನ್‌ ಪದಾರ್ಪಣೆ ಮಾಡಿದ್ದರು. ಆದರೆ, ಮೊದಲನೇ ಸುತ್ತಿನಲ್ಲೇ ಪ್ಯಾಟ್‌ ರಾಫ್ಟರ್‌ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿದ್ದರು. ಈ ವೇಳೆ ಕ್ಯಾಸ್ಪರ್‌ ರುಡ್‌ ಅವರ ತಂದೆ ಕ್ರಿಸ್ಟಿಯನ್‌ ಅವರು ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದರು. 
2001ರಲ್ಲಿ ಕ್ರಿಸ್ಟಿಯನ್‌, ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಕೊನೆಯ ಬಾರಿ ಭಾಗವಹಿಸಿದ್ದರು. ಮೊದಲನೇ ಸುತ್ತಿನಲ್ಲೇ ಸರ್ಜೀಸ್‌ ಸರ್ಜೀಸಿಯನ್‌ ವಿರುದ್ಧ ಮೊದಲನೇ ಸುತ್ತಿನಲ್ಲೇ ಸೋಲು ಅನುಭವಿಸಿದ್ದರು. ಒಂದು ವೇಳೆ ಮೊದಲನೇ ಸುತ್ತಿನಲ್ಲಿ ಜಯಿಸಿದ್ದರೆ, ಎರಡನೇ ಸುತ್ತಿನಲ್ಲಿ ರೋಜರ್‌ ಫೆಡರರ್‌ ಅವರನ್ನು ಎದುರಿಸುತ್ತಿದ್ದರು. 
" ಶುಕ್ರವಾರ ಎದುರಿಸುತ್ತಿರುವ ಕ್ಯಾಸ್ಪರ್ ರುಡ್ ಅವರಿಗಿಂತ ಅವರ ತಂದೆ ಕ್ರಿಸ್ಟಿಯನ್‌ ಅವರ ಬಗ್ಗೆ ತುಂಬಾ ತಿಳಿದಿದ್ದೇನೆ. ಆದರೆ, ಅವರ ವಿರುದ್ಧ ನಾನೂ ಎಂದೂ ಆಡಿರಲಿಲ್ಲ" ಎಂದು ಫೆಡರರ್‌ ಹೇಳಿರುವುದನ್ನು ಎಟಿಪಿಟೂರ್‌ ವೆಬ್‌ಸೈಟ್‌ ಪ್ರಕಟಿಸಿದೆ.  
"ಕ್ಯಾಸ್ಪರ್ ರುಡ್ ಅವರು ಕಳೆದ ಹಲವು ವರ್ಷಗಳಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದಾರೆ. ವಿಶೇಷವಾಗಿ ಅವರು ಮಣ್ಣಿನ ಅಂಗಳದಲ್ಲಿ ಉತ್ತಮ ಪ್ರದರ್ಶನ ತೋರಲಿದ್ದಾರೆ. ಆದರೆ, ಆತನ ಆಟವನ್ನು ನಾನು ಹೆಚ್ಚು ನೋಡಿಲ್ಲ" ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com