23 ಬಾರಿ ಚಾಂಪಿಯನ್ ಸೆರೆನಾ ಮಣಿಸಿ ಗ್ರಾಂಡ್ ಸ್ಲಾಮ್ ಗೆದ್ದ 19 ವರ್ಷದ ಬಿಯಾಂಕಾ ಆಂಡ್ರೀಸ್ಕು

ಯುಎಸ್ ಓಪನ್ ಟೂರ್ನಿಯಲ್ಲಿ 23 ಗ್ರಾಂಡ್ ಸ್ಲಾಮ್ ವಿನ್ನರ್ ಅಮೆರಿಕದ ಸೆರೆನಾ ವಿಲಿಯಮ್ಸ್ ಗೆ 19 ವರ್ಷದ ಉದಯೋನ್ಮುಖ ಆಟಗಾರ್ತಿ ಬಿಯಾಂಕಾ ಆಂಡ್ರೀಸ್ಕು ಆಘಾತ ನೀಡಿದ್ದು. ಚೊಚ್ಚಲ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.
ಪ್ರಶಸ್ತಿ ಗೆದ್ದ ಬಿಯಾಂಕಾ ಆಂಡ್ರೀಸ್ಕು
ಪ್ರಶಸ್ತಿ ಗೆದ್ದ ಬಿಯಾಂಕಾ ಆಂಡ್ರೀಸ್ಕು

ವಾಷಿಂಗ್ಟನ್: ಯುಎಸ್ ಓಪನ್ ಟೂರ್ನಿಯಲ್ಲಿ 23 ಗ್ರಾಂಡ್ ಸ್ಲಾಮ್ ವಿನ್ನರ್ ಅಮೆರಿಕದ ಸೆರೆನಾ ವಿಲಿಯಮ್ಸ್ ಗೆ 19 ವರ್ಷದ ಉದಯೋನ್ಮುಖ ಆಟಗಾರ್ತಿ ಬಿಯಾಂಕಾ ಆಂಡ್ರೀಸ್ಕು ಆಘಾತ ನೀಡಿದ್ದು. ಚೊಚ್ಚಲ ಅಮೆರಿಕ ಓಪನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಇಲ್ಲಿನ ಮಾರ್ಗರೇಟ್ ಕೋರ್ಟ್ ನಲ್ಲಿ ನಡೆದ ಯುಎಸ್ ಓಪನ್ ಫೈನಲ್ ಪಂದ್ಯದಲ್ಲಿ ಕೆನಡಾ ಮೂಲದ 19 ವರ್ಷದ ಬಿಯಾಂಕಾ ಆಂಡ್ರೀಸ್ಕು 23 ಗ್ರಾಂಡ್ ಸ್ಲಾಮ್ ವಿನ್ನರ್ ಅಮೆರಿಕದ ಸೆರೆನಾ ವಿಲಿಯಮ್ಸ್ ಅವರನ್ನು 6-3, 7-5 ನೇರ ಸೆಟ್ ಗಳಿಂದ ಮಣಿಸಿ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ.

ಆರಂಭದಿಂದಲೂ ತಮ್ಮ ಆಕ್ರಮಣಕಾರಿ ಆಟದಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಬಿಯಾಂಕಾ ಆಂಡ್ರೀಸ್ಕು ಮೊದಲ ಸೆಟ್ ಅನ್ನು 6-3ರಲ್ಲಿ ತಮ್ಮದಾಗಿಸಿಕೊಂಡರು. 2ನೇ ಸೆಟ್ ನಲ್ಲೂ ಅದೇ ರೀತಿಯ ಪ್ರದರ್ಶನ ನೀಡಿದ ಬಿಯಾಂಕಾ ಆಂಡ್ರೀಸ್ಕುಗೆ ಸೆರೆನಾ ಬಲವಾದ ಪ್ರತಿರೋಧ ತೋರಿದರು. ಆದರೆ ಅವರು ಐದು ಸೆಟ್ ಗಳನ್ನು ಮಾತ್ರ ತಮ್ಮದಾಗಿಸಿಕೊಂಡರೆ, ಬಿಯಾಂಕಾ ಆಂಡ್ರೀಸ್ಕು 7 ಸೆಟ್ ಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಫೈನಲ್ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು. 

ಆ ಮೂಲಕ 23 ಬಾರಿಯ ಗ್ರಾಂಡ್ ಸ್ಲಾಮ್ ವಿಜೇತೆ ಸೆರೆನಾರನ್ನು ಮಣಿಸಿ ಚೊಚ್ಚಲ ಅಮೆರಿಕ ಓಪನ್ ಗ್ರಾಂಡ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟಿರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com