ಬ್ಯಾಡ್ಮಿಂಟನ್ ನಲ್ಲಿ ಭಾರಕ್ಕೆ ಡಬಲ್ ಧಮಾಕಾ! ಸೌರಭ್ ವರ್ಮಾ ಗೆ ವಿಯೆಟ್ನಾಂ ಓಪನ್ ಚಾಂಪಿಯನ್ ಪ್ರಶಸ್ತಿ

ಭಾನುವಾರ ಭಾರತದ ಬ್ಯಾಡ್ಮಿಂಟನ್ ಪ್ರಿಯರಿಗೆ ಡಬಲ್ ಖುಷಿ ಸಿಕ್ಕಿದೆ. ಇಂದು ಬೆಳಿಗ್ಗೆ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಅವರು ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್ ಕಿರೀಟ ಮುಡಿಗೇರಿಸಿಕೊಂಡಿದ್ದರೆ ಇದೀಗ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಕ್ರೀಡಾಪಟು ಸೌರಭ್ ವರ್ಮಾ ವಿಯೆಟ್ನಾಂ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸೌರಭ್ ವರ್ಮಾ
ಸೌರಭ್ ವರ್ಮಾ

ಹೊ ಚಿ ಮಿನ್‌ ಸಿಟಿ: ಭಾನುವಾರ ಭಾರತದ ಬ್ಯಾಡ್ಮಿಂಟನ್ ಪ್ರಿಯರುಇಗೆ ಡಬಲ್ ಖುಷಿ ಸಿಕ್ಕಿದೆ. ಇಂದು ಬೆಳಿಗ್ಗೆ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಅವರು ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್ ಕಿರೀಟ ಮುಡಿಗೇರಿಸಿಕೊಂಡಿದ್ದರೆ ಇದೀಗ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಕ್ರೀಡಾಪಟು ಸೌರಭ್ ವರ್ಮಾ ವಿಯೆಟ್ನಾಂ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಭಾರತದ ಹೆ ಸೌರಭ್ ವರ್ಮಾ ಇಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಫೈನಲ್ಸ್ ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ ಪುರುಷ ಸಿಂಗಲ್ಸ್ ವಿಭಾಗದ ಫೈನಲ್ಸ್ ನಲ್ಲಿ  ಸೌರಭ್ ವರ್ಮಾ ಚೀನಾದ ಸನ್‌ ಫೀ ಕ್ಸಿಂಗ್‌ ಅವರನ್ನು 21-12, 17-21, 21-14 ಸೆಟ್ ಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

75 ಸಾವಿರ ಮೆರಿಕನ್ ಡಾಲರ್ ಪ್ರಶಸ್ತಿ ಮೊತ್ತದ ವಿಯೆಟ್ನಾಂ ಓಪನ್ ಬಿಡಬ್ಲ್ಯುಎಫ್ ಟೂರ್ ಸೂಪರ್ 100 ಸರಣಿಯಲ್ಲಿ ಅಂತಿಮ ಸುತ್ತಿನ ಪಂದ್ಯ ಒಂದು ಗಂಟೆ 12 ನಿಮಿಷ ಕಾಲ ನಡೆದಿತ್ತು.

ಪ್ರಶಸ್ತಿ ವಿಜೇತರಾದ ನಂತರ ಮಾತನಾಡಿದ ಸೌರಭ್ "ಈ ಗೆಲುವು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.ಇನ್ನು ಮುಂದೆ ಸಹ ತಮ್ಮ ಉತ್ತಮ ಫಾರ್ಮ್ ಅನ್ನು ಕಾಪಾಡಿಕೊಳ್ಳುವ ಭರವಸೆ ಹೊಂದಿದ್ದೇನೆ" ಎಂದರು.

ಕಳೆದ ವರ್ಷ ಡಚ್ ಓಫನ್ ಹಾಗೂ ಕೊರಿಯಾ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಮಧ್ಯಪ್ರದೇಶ ಮೂಲದ ಸೌರಭ್ ಈ ವರ್ಷದಲ್ಲಿ ಮೊದಲ ಚಾಂಪಿಯನ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com