ಲಕ್ಷ್ಯಸೇನ್ ಮುಡಿಗೆ ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್ ಕಿರೀಟ

ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಅವರು ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಲಕ್ಷ್ಯಸೇನ್
ಲಕ್ಷ್ಯಸೇನ್

ಲ್ಯುವೆನ್: ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಅವರು ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

34 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್  ಫೈನಲ್ ಹಣಾಹಣಿಯಲ್ಲಿ ಪಾರಮ್ಯ ಮೆರೆದ ಭಾರತದ ಆಟಗಾರ 21-14, 21-15 ಅಂತರದಲ್ಲಿ ಡೆನ್ಮಾರ್ಕ್ ನ ವಿಕ್ಟರ್ ಸ್ವೆಂಡ್ಸೆನ್ ವಿರುದ್ಧ ಗೆದ್ದು ಚಾಂಪಿಯನ್ ಆದರು.

ಇದಕ್ಕು ಮುನ್ನ 48 ನಿಮಿಷಗಳ ಕಾಲ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್ ನವರೇ ಆದ ಬ್ರುನ್ ವಿರುದ್ಧ 21-18, 21-11 ಅಂತರದಲ್ಲಿ ಲಕ್ಷ್ಯಸೇನ್ ಗೆಲುವಿನ ನಗೆ ಬೀರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com