ರಣಜಿ ಟ್ರೋಫಿ: ಕರ್ನಾಟಕ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತ, ಜಮ್ಮು ಮತ್ತು ಕಾಶ್ಮೀರಕ್ಕೆ 331 ರನ್ ಗಳ ಬೃಹತ್ ಗುರಿ

ಪ್ರಸ್ತುತ ನಡೆಯುತ್ತಿರುವ 2019/20ನೇ ಸಾಲಿನ ಸರಣಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಿದ್ದು, ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 331 ಸವಾಲಿನ ಗುರಿ ನೀಡಿದೆ.
ಕರ್ನಾಟಕ ತಂಡ (ಸಂಗ್ರಹ ಚಿತ್ರ)
ಕರ್ನಾಟಕ ತಂಡ (ಸಂಗ್ರಹ ಚಿತ್ರ)

ಜಮ್ಮು: ಪ್ರಸ್ತುತ ನಡೆಯುತ್ತಿರುವ 2019/20ನೇ ಸಾಲಿನ ಸರಣಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತಪಡಿಸಿಕೊಂಡಿದ್ದು, ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 331 ಸವಾಲಿನ ಗುರಿ ನೀಡಿದೆ.

ಇಲ್ಲಿನ ಗಾಂಧಿ ಮೆಮೋರಿಯಲ್ ವಿಜ್ಞಾನ ಕಾಲೇಜಿನಲ್ಲಿ ಐದನೇ ದಿನವಾದ ಇಂದು ಬೆಳಗ್ಗೆ ನಾಲ್ಕು ವಿಕೆಟ್ ಕಳೆದುಕೊಂಡು 245 ರನ್‌ ಗಳೊಂದಿಗೆ ದ್ವಿತೀಯ ಇನಿಂಗ್ಸ್‌ ಮುಂದುವರಿಸಿದ ಕರ್ನಾಟಕ ತಂಡ 106.5 ಓವರ್‌ಗಳಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 330 ರನ್ ಗಳಿಸಿದ್ದು, ಆತಿಥೇಯ ಜಮ್ಮು ಮತ್ತು ಕಾಶ್ಮೀರ ತಂಡಕ್ಕೆ 331 ರನ್ ಗುರಿ ನೀಡಿದೆ.

ನಾಲ್ಕನೇ ದಿನ ಅರ್ಧಶತಕ ಸಿಡಿಸಿದ್ದ ಕೆ.ವಿ ಸಿದ್ಧಾರ್ಥ್ ಇಂದು ಕೇವಲ ಎರಡು ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು. 177 ಎಸೆತಗಳನ್ನು ಎದುರಿಸಿದ್ದ ಅವರು ಎರಡು ಸಿಕ್ಸರ್ ಹಾಗೂ 10 ಬೌಂಡರಿಯೊಂದಿಗೆ 98 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಶತಕದಂಚಿನಲ್ಲಿ ಅವರು ಅಬಿದ್ ಮುಷ್ತಾಕ್‌ ಅವರಿಗೆ ವಿಕೆಟ್‌ ಒಪ್ಪಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಈ ಪಂದ್ಯವನ್ನು ಗೆಲ್ಲಲು ಬಾಕಿ ಉಳಿದಿರುವ ಎರಡು ಸೆಷನ್ ಗಳಲ್ಲಿ 331 ರನ್ ಗಳ ಬೃಹತ್ ಸವಾಲನ್ನು ಮೆಟ್ಟಿ ನಿಲ್ಲಿಬೇಕಿದೆ. ಎರಡೂ ಸೆಷನ್ ಗಳಲ್ಲಿ ಸುಮಾರು 58 ರಿಂದ 68 ಓವರ್ ಗಳನ್ನು ಎಸೆಯುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ಡ್ರಾ ಆದರೆ ಆಗ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ಕರ್ನಾಟಕ ನಿರಾಯಾಸವಾಗಿ ಸೆಮಿಫೈನಲ್ ಪ್ರವೇಶ ಮಾಡಲಿದೆ. ಇದೀಗ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಜಮ್ಮು ಮತ್ತು ಕಾಶ್ಮೀರ ತಂಡ 21 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡಿದ್ದು, ಬಾಕಿ ಇರುವ 9 ವಿಕೆಟ್ ಗಳೊಂದಿಗೆ 310 ರನ್ ಗಳಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com