ಡಿವಿಜ್ ಶರಣ್ ಗೆ ಸೋಲು : ಭಾರತದ ಆಸ್ಟ್ರೇಲಿಯಾ ಓಪನ್ ಅಭಿಯಾನ ಅಂತ್ಯ

ಭಾರತದ ಡಿವಿಜ್ ಶರಣ್ ಹಾಗೂ ಜತೆಗಾರ ನ್ಯೂಜಿಲೆಂಡ್ ನ ಅರ್ಟೆಮ್ ಸಿಟ್ಯಾಕ್ ಜೋಡಿಯು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ನಡೆಯಿತು.
ಡಿವಿಜ್ ಶರಣ್
ಡಿವಿಜ್ ಶರಣ್
Updated on

ಮೆಲ್ಬೋರ್ನ್: ಭಾರತದ ಡಿವಿಜ್ ಶರಣ್ ಹಾಗೂ ಜತೆಗಾರ ನ್ಯೂಜಿಲೆಂಡ್ ನ ಅರ್ಟೆಮ್ ಸಿಟ್ಯಾಕ್ ಜೋಡಿಯು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಪುರುಷರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ನಡೆಯಿತು.

ಶುಕ್ರವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಶರಣ್- ಸಿಟ್ಯಾಕ್ ಜೋಡಿಯು 7-6 (6-2), 6-3 ಅಂತರದಲ್ಲಿ ಬ್ರೆಜಿಲ್ ನ ಬ್ರುನೊ ಸೋರ್ಸ್ ಮತ್ತು ಕ್ರೋವೇಷ್ಯಾದ ಮ್ಯಾಟ್ ಪಾವಿಚ್ ಜೋಡಿಯ ವಿರುದ್ಧ ಪರಾಭವಗೊಂಡಿತು. ಒಂದು ಗಂಟೆ 19 ನಿಮಿಷಗಳ ಕಾಲ ನಡೆದ ಕಾಳಗದಲ್ಲಿ ಭಾರತದ ಆಟಗಾರನ ಅಭಿಯಾನ ಅಂತ್ಯವಾಯಿತು.

ಡಿವಿಜ್ ಶರಣ್ ಜೋಡಿಯು ಇದಕ್ಕೂ ಮುನ್ನ ಬುಧವಾರ ಮೊದಲನೇ ಸುತ್ತಿನಲ್ಲಿ ಪ್ಯಾಬ್ಲೊ ಕರೆನೊ ಮತ್ತು ಜಾವೊ ಸೌಸ ಜೋಡಿಯ ವಿರುದ್ಧ 6-4, 7-5 ಅಂತರದಲ್ಲಿ ಗೆದ್ದು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿತ್ತು. ಅದೇ ಗೆಲುವಿನ ಲಯವನ್ನು ಎರಡನೇ ಸುತ್ತಿನಲ್ಲಿ ವಿಸ್ತರಿಸುವಲ್ಲಿ ಶರಣ್ ಜೋಡಿ ವಿಫಲವಾಯಿತು.

ಭಾರತದ ಮತ್ತೊಬ್ಬ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಅವರು ಮೊದಲನೇ ಸುತ್ತಿನಲ್ಲಿಯೇ ತನ್ನ ಜತೆಗಾರ ಜಪಾನ್ ನ ಯಸುಟಕ ಉಚಿಯಮ ಅವರೊಂದಿಗೆ 1-6, 6-3, 3-6 ಅಂತರದಲ್ಲಿ ಅಮೆರಿಕದ ಬ್ರಿಯನ್ ಸಹೋದರ ಸವಾಲಿಗೆ ಮಣಿದಿದ್ದರು.

ಸುದೀರ್ಘ ಅವಧಿಯ ಬಳಿಕ ಗ್ರ್ಯಾನ್ ಸ್ಲ್ಯಾಮ್ ಗೆ ಮರಳಿದ್ದ ಭಾರತದ ಸಾನಿಯಾ ಮಿರ್ಜಾ ಅವರು ಮಹಿಳಾ ಡಬಲ್ಸ್ ಮೊದೊಲ ಸುತ್ತಿನ ಹಣಾಹಣಿಯಲ್ಲಿ ಜತೆಗಾರ್ತಿ ಉಕ್ರೈನ್ ನ ನದಿಯಾ ಕಿಚ್ನಾಕ್ ಅವರೊಂದಿಗೆ ಆಡುವ ವೇಳೆ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಟೂರ್ನಿಯಿಂದ ವಿಥ್ ಡ್ರಾ ಮಾಡಿಕೊಂಡರು.

ಇದಕ್ಕೂ ಮುನ್ನ ಸಾನಿಯಾ ಮಿರ್ಜಾ ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರಾ ಡಬಲ್ಸ್ ನಲ್ಲಿ ಆಡಬೇಕಿತ್ತು. ಗಾಯದಿಂದಾಗಿ ಹೊರಗುಳಿದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com