ಬ್ಯಾಸ್ಕೆಟ್ ಬಾಲ್ ದಂತಕತೆ ಕೋಬೆ ಬ್ರಯಾಂಟ್ ಇನ್ನಿಲ್ಲ! ಹೆಲಿಕಾಪ್ಟರ್ ದುರಂತದಲ್ಲಿ ದುರ್ಮರಣ

ವಿಶ್ವದ ಬ್ಯಾಸ್ಕೆಟ್ ಬಾಲ್‌ ಅಭಿಮಾನಿಗಳ ಪಾಲಿಗೆ ಇದು ನಂಬಲಾಗದ ಸುದ್ದಿ! ಆದರೂ, ಇದನ್ನು ನಂಬಲೇಬೇಕು. ಬ್ಯಾಸ್ಕೆಟ್ ಬಾಲ್ ನ ದಂತಕತೆ ಕೋಬೆ ಬ್ರಯಾಂಟ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಸಾವಿಗೀಡಾಗಿದ್ದಾರೆ.
ಕೋಬೆ ಬ್ರಯಾಂಟ್
ಕೋಬೆ ಬ್ರಯಾಂಟ್
Updated on

ನ್ಯೂಯಾರ್ಕ್: ವಿಶ್ವದ ಬ್ಯಾಸ್ಕೆಟ್ ಬಾಲ್‌ ಅಭಿಮಾನಿಗಳ ಪಾಲಿಗೆ ಇದು ನಂಬಲಾಗದ ಸುದ್ದಿ! ಆದರೂ, ಇದನ್ನು ನಂಬಲೇಬೇಕು. ಬ್ಯಾಸ್ಕೆಟ್ ಬಾಲ್ ನ ದಂತಕತೆ ಕೋಬೆ ಬ್ರಯಾಂಟ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಸಾವಿಗೀಡಾಗಿದ್ದಾರೆ. 41ರ ವಯಸ್ಸಿನ ಲಾಸ್‌ ಏಂಜಲಿಸ್ ಸ್ಟೈಕರ್ಸ್ ತಂಡದ ಮಿನುಗುತಾರೆ ಬ್ರಯಾಂಟ್ ಈಗ ಕೇವಲ ನೆನಪು ಮಾತ್ರ.

1996ರಿಂದ 2016ರ ಅವಧಿಯಲ್ಲಿ ಐದು ಬಾರಿ ಪ್ರತಿಷ್ಠಿತ ಎನ್‌ಬಿಎ ಚಾಂಪಿಯನ್ ಆಗಿದ್ದ ಬ್ರಯಾಂಟ್ ಅವರು ಪತ್ನಿ ವೆನೀಸಾ ಹಾಗೂ ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ಕ್ಯಾಲಿಫೋರ್ನಿಯಾದ ಕ್ಯಾಲಬಾಸಾಸ್ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಬ್ಯಾಸ್ಕೆಟ್‌ಬಾಲ್ ದಂತಕಥೆ ನಿಧನರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರಂತದಲ್ಲಿ ಕೋಬೆ ಬ್ರಯಾಂಟ್ ಅವರೊಂದಿಗೆ ಹೆಲಿಕಾಪ್ಟರಿನಲ್ಲಿದ್ದ ಇತರ ಐವರು ಸಹ ದುರ್ಮರಣಕ್ಕೆ ಈಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಈ ದುರ್ಘಟನೆಯಲ್ಲಿ ಸಿಕೋರ್ಸ್ಕಿ ಎಸ್- 76 ಹೆಲಿಕಾಪ್ಟರಿನಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬಾಸ್ಕೆಟ್ಬಾಲ್ ಅಂಗಳದಲ್ಲಿ ಜೊತೆಗಾರ ಲಿಬ್ರಾನ್ ಜೇಮ್ಸ್ ತಮ್ಮ ಸಾರ್ವಕಾಲಿಕ ಗಳಿಕೆಯ ದಾಖಲೆ ಮುರಿದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿರುವುದು ಕ್ರೀಡಾ ಪ್ರೇಮಿಗಳನ್ನು ದಂಗುಬಡಿಸಿದೆ. ತಮ್ಮ ಇಪ್ಪತ್ತು ವರ್ಷಗಳ ಕ್ರೀಡಾ ವೃತ್ತಿಯಲ್ಲಿ ಬ್ರಯಾಂಟ್ ಎರಡು ಬಾರಿ ಅಮೆರಿಕದ ಪರವಾಗಿ ಒಲಿಂಪಿಕ್ ಚಿನ್ನ ಗೆದ್ದಿದ್ದರು.

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು "ಬಾಸ್ಕೆಟ್‌ಬಾಲ್‌ನ ನಂತರ ಬ್ರಯಾಂಟ್ ಅವರ ಜೀವನವನ್ನು "ಎರಡನೆಯ ಕಾರ್ಯದ ಅರ್ಥಪೂರ್ಣವಾಗಿಸಲು ಪ್ರಾರಂಭಿಸುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

"ಗಿಯನ್ನಾಳನ್ನು ಕಳೆದುಕೊಳ್ಳುವುದು ಹೆತ್ತವರಂತೆ ನಮಗೆ ಇನ್ನಷ್ಟು ಹೃದಯ ವಿದ್ರಾವಕವಾಗಿದೆ. ಮಿಚೆಲ್ ಮತ್ತು ನಾನು ಯೋಚಿಸಲಾಗದ ದಿನದಂದು ವನೆಸ್ಸಾ ಮತ್ತು ಇಡೀ ಬ್ರಯಾಂಟ್ ಕುಟುಂಬಕ್ಕೆ ಪ್ರೀತಿ ಮತ್ತು ಪ್ರಾರ್ಥನೆಗಳನ್ನು ಕಳುಹಿಸುತ್ತೇವೆ." ಎಂದಿದ್ದಾರೆ.

ಟೆನಿಸ್ ತಾರೆ ಮರಿಯಾ ಶರಪೋವಾ ಅವರು "ಬ್ರಯಾಂಟ್ ಅವರ "ಔದಾರ್ಯ" ಮತ್ತು "ನನ್ನ ಕೆಲವು ಕಷ್ಟದ ಕ್ಷಣಗಳಲ್ಲಿ ಅವರು ನಿಗದಿಪಡಿಸಿದ ಸಮಯವನ್ನು" ಎಂದಿಗೂ ಮರೆಯುವುದಿಲ್ಲ,'' ಎಂದು ಟ್ವೀಟ್ ಮಾಡಿದ್ದಾರೆ.

"ನಾನು ಶಾಶ್ವತವಾಗಿ ಕೃತಜ್ಞಳಾಗಿದ್ದೇನೆ. ನನ್ನ ಹೃದಯವು ನಿಮ್ಮ ಮತ್ತು ನಿಮ್ಮ ಸುಂದರ ಕುಟುಂಬದೊಂದಿಗೆ ಇದೆ." ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com