ಡೋಪಿಂಗ್ ಪ್ರಕರಣ: ಆಸ್ಟ್ರೇಲಿಯಾಗೆ 2012 ರ ಒಲಿಂಪಿಕ್ ಪದಕ ಕಳೆದುಕೊಳ್ಳುವ ಭೀತಿ

ಡೋಪಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ 2012 ರ ಲಂಡನ್ ಒಲಿಂಪಿಕ್ಸ್‌ ಈಜುಸ್ಪರ್ಧೆಯಲ್ಲಿ ಗಳಿಸಿದ್ದ ಪದಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಡೋಪಿಂಗ್ ಪ್ರಕರಣ: ಆಸ್ಟ್ರೇಲಿಯಾಗೆ 2012 ರ ಒಲಿಂಪಿಕ್ ಪದಕ ಕಳೆದುಕೊಳ್ಳುವ ಭೀತಿ
Updated on

ಡೋಪಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ 2012 ರ ಲಂಡನ್ ಒಲಿಂಪಿಕ್ಸ್‌ ಈಜುಸ್ಪರ್ಧೆಯಲ್ಲಿ ಗಳಿಸಿದ್ದ ಪದಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಬ್ರೆಂಟನ್ ರಿಕಾರ್ಡ್ ಅವರ ಡೋಪಿಂಗ್ ಪ್ರಕರಣದ ವಿಚಾರಣೆ ಸೋಮವಾರನಡೆಸಲಾಗಿದೆ ಎಂದು ಕೋರ್ಟ್ ಆಫ್ ಆರ್ಬಿಟ್ರೇಷನ್ ಹೇಳಿದೆ, ಲಂಡನ್ ಕ್ರೀಡಾಕೂಟದ ಎಂಟು ವರ್ಷಗಳ ಬಳಿಕ ಈ ಮಾದರಿ ಪರೀಕ್ಷೆ ನಡೆದಿದೆ.  ರಿಕಾರ್ಡ್ 4x100 ಮೀಟರ್ ಮೆಡ್ಲೆ ರಿಲೇಯಲ್ಲಿ ಕಂಚಿನ ಪದಕ ಗೆದ್ದಿದ್ದರು.

ಪ್ರಕರಣವನ್ನು ಕಳೆದ ವಾರ ಆಸ್ಟ್ರೇಲಿಯಾದ ಮಾಧ್ಯಮಬಹಿರಂಗಪಡಿಸಿತ್ತು.

ಮೂರು ಬಾರಿ ಒಲಿಂಪಿಕ್ ಪದಕ ವಿಜೇತ ರಿಕಾರ್ಡ್ ಅವರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ  ಮೈಕೆಲ್ ಫೆಲ್ಪ್ಸ್ ಅವರನ್ನು ಒಳಗೊಂಡ  ಯುಎಸ್ ತಂಡವು ಬಂಗಾರದ ಪದಕ ಗಳಿಸಿಕೊಂಡಿತ್ತು.

ಸಧ್ಯ ರಿಕಾರ್ಡ್ ಹಾಗೂ ಒಲಿಂಪಿಕ್ ಸಮಿತಿ ನಡುವಿನ ಪ್ರಕರಣದ ವಿಚಾರಣೆ ವಿಡಿಯೋ ಕಾನ್ಪರೆನ್ಸ್  ಮೂಲಕ ನಡೆದಿದ್ದು ತೀರ್ಪಿನ ದಿನವನ್ನು ಇನ್ನೂ ನಿಗದಿಪಡಿಸಿಲ್ಲ.

2012 ರ ಒಲಿಂಪಿಕ್ಸ್‌ನ ಮಾದರಿಗಳನ್ನು ಎಂಟು ವರ್ಷಗಳವರೆಗೆ ಸಂಗ್ರಹಿಸಲು ಅನುಮತಿಸಲಾಗಿದೆ ಮತ್ತು ಪ್ರಯೋಗಾಲಯಗಳು ಉತ್ತಮ ವಿಧಾನಗಳನ್ನು ಅಭಿವೃದ್ಧಿಪಡಿಸಿದಾಗ ಮರು ಪರೀಕ್ಷಿಸಲಾಗುತ್ತದೆ. ಇತರ ನಿಷೇಧಿತ ವಸ್ತುಗಳ ಬಳಕೆಯನ್ನು ಮರೆಮಾಡಬಲ್ಲ ಮೂತ್ರವರ್ಧಕ ಮತ್ತು ಮರೆಮಾಚುವಏಜೆಂಟ್ ಫ್ಯೂರೋಸೆಮೈಡ್‌ ಪರೀಕ್ಷೆಯಲ್ಲಿ ರಿಕಾರ್ಡ್ ನ ಧನಾತ್ಮಕ ವರದಿ ಬಂದಿತ್ತು. ಆ ಸಮಯದಲ್ಲಿ ರಿಕಾರ್ಡ್‌ನ ಮೂತ್ರದ ಮಾದರಿಯಲ್ಲಿ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ರಿಕಾರ್ಡ್‌ನ ಮಾದರಿಯಲ್ಲಿ ನಿಷೇಧಿತ ವಸ್ತುವಿನ ಒಂದು ಸಣ್ಣ ಪ್ರಮಾಣವಿದೆ ಎಂದು ವರದಿಯಾಗಿದೆ. ಇದು ಕಲುಷಿತವಾದ ಪ್ರತ್ಯಕ್ಷವಾದ ಔಷಧಿಗಳಿಂದ ಬಂದಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.

ಒಂದು ವೇಳೆ ಡೋಪಿಂಗ್ ಪ್ರಕರಣದಲ್ಲಿ ತಪ್ಪು ಸಾಬೀತಾಗಿ ಆಸ್ಟ್ರೇಲಿಯಾವನ್ನು ಅನರ್ಹಗೊಳಿಸಿದರೆ, ನಾಲ್ಕನೇ ಸ್ಥಾನದಲ್ಲಿರುವ ಬ್ರಿಟಿಷ್ ತಂಡ ಕಂಚಿನ ಪದಕ ಗಳಿಸಿಕೊಳ್ಳಲಿದೆ.

37 ರ ಹರೆಯದ ರಿಕಾರ್ಡ್, 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 4x100 ಮೆಡ್ಲೆ ರಿಲೇಯಲ್ಲಿ,  200 ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಒಟ್ಟಾರೆ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com