ಕೋವಿಡ್ ನಿಯಂತ್ರಣಕ್ಕೆ ಬಾರದಿದ್ದರೆ ಟೋಕಿಯೊ ಒಲಿಂಪಿಕ್ಸ್ ರದ್ದು: ಯೊಶಿರೊ

ಮುಂದಿನ ವರ್ಷ ಒಂದು ವೇಳೆ ಕೋವಿಡ್-19 ನಿಯಂತ್ರಣಕ್ಕೆ ಬಾರದಿದ್ದರೆ ಈಗಾಗಲೇ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಪಿಕ್ಸ್ ರದ್ದುಗೊಳ್ಳಲಿದೆ ಎಂದು ಒಲಿಂಪಿಕ್ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೊ ಮೋರಿ ಹೇಳಿದ್ದಾರೆ.
ಯೋಶಿರೊ ಮೋರಿ
ಯೋಶಿರೊ ಮೋರಿ

ಟೋಕಿಯೊ: ಮುಂದಿನ ವರ್ಷ ಒಂದು ವೇಳೆ ಕೋವಿಡ್-19 ನಿಯಂತ್ರಣಕ್ಕೆ ಬಾರದಿದ್ದರೆ ಈಗಾಗಲೇ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಪಿಕ್ಸ್ ರದ್ದುಗೊಳ್ಳಲಿದೆ ಎಂದು ಒಲಿಂಪಿಕ್ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೊ ಮೋರಿ ಹೇಳಿದ್ದಾರೆ.

ಒಂದು ವೇಳೆ ಕೊರೊನಾ ವೈರಾಣು ಮುಂದಿನ ವರ್ಷವೂ ಮುಂದುವರಿದರೆ ಒಲಿಂಪಿಕ್ಸ್ ಕೂಟವನ್ನು 2020ಕ್ಕೆ ಮುಂದೂಡುವ ಸಾಧ್ಯತೆ ಇದಿಯೇ ಎಂಬ ಪ್ರಶ್ನೆಗೆ ಮೋರಿ ಈ ಮೇಲಿನಂತೆ ಹೇಳಿದ್ದಾರೆ. ಇಲ್ಲ. ಈ ಪ್ರಕರಣದಲ್ಲಿ ಇದು ರದ್ದಾಗಲಿದೆ ಎಂದು ನಿಕ್ಕಾನ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಮೋರಿ ಹೇಳಿದ್ದಾರೆ. 

ಇತ್ತಿಚೆಗಷ್ಟೇ ಒಲಿಂಪಿಕ್ ಇತಿಹಾಸದಲ್ಲಿ ಮೊದಲ ಬಾರಿಗೆ ಕೂಟವನ್ನು ಮುಂದೂಡಲಾಗಿತ್ತು. ಈ ಹಿಂದೆ ಕ್ರೀಡಾಕೂಟವು ರದ್ದಾಗಿತ್ತೇ ಹೊರತು ಹಿಂದೆಂದೂ ಮುಂದೂಡಿಕೆಯಾಗಿರಲಿಲ್ಲ. ಕೊರೊನಾ ವೈರಸ್ ನಿಂದಾಗಿ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಕ್ರೀಡಾಕೂಟ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಒಂದು ವೇಳೆ ಈ ವರ್ಷ ಟೋಕಿಯೊ ಒಲಿಂಪಿಕ್ಸ್ ಜರುಗಿದರೆ, ನಮ್ಮ ಕ್ರೀಡಾಪಟುಗಳನ್ನು ಕಳುಹಿಸುವುದಿಲ್ಲ ಎಂದು ಕೆನಾಡ ಮತ್ತು ಆಸ್ಟ್ರೇಲಿಯಾದ ಒಕ್ಕೂಟಗಳು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದವು. ಹೀಗಾಗಿ ಟೋಕಿಯೊ ಕೂಟವನ್ನು 2021ರ ಜುಲೈ 23ರಿಂದ ಆಗಸ್ಟ್ 8ಕ್ಕೆ ಮುಂದೂಡಲಾಗಿದೆ. ಇದೇ ವೇಳೆ ಟೋಕಿಯೊ ಪ್ಯಾರಾಲಿಂಪಿಂಕ್ಸ್ ಆಗಸ್ಟ್ 24ರಿಂದ ಸೆಪ್ಟೆಂಬರ್ 5ಕ್ಕೆ ನಿಗದಿಗೊಳಿಸಲಾಗಿದೆ.

ಈಗ್ಗೆ ಒಂದು ವಾರದ ಹಿಂದಷ್ಟೇ ಇದೇ ವಿಚಾರವಾಗಿ ಮಾತನಾಡಿದ್ದ ಸಂಘಟನಾ ಸಮಿತಿಯ ಅಧ್ಯಕ್ಷ ಯೊಶಿರೊ ಮೊರಿ, ಕೋವಿಡ್ 19 ವೈರಸ್‌ ಕಾರಣದಿಂದ ಈಗಾಗಲೇ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್‌ ಪಂದ್ಯಾವಳಿ ಇನ್ನು ಯಾವುದೇ ಕಾರಣಕ್ಕೂ ಮುಂದೂಡಲ್ಪಡದು ಎಂದು ಹೇಳಿದ್ಗರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com