ಭಾರತೀಯ ಸರ್ಫಿಂಗ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದ ಸರ್ಫಿಂಗ್ ಸ್ವಾಮಿ ನಿಧನ

ಮಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿ ಸರ್ಫಿಂಗ್‌(ಸಮುದ್ರ ಕ್ರೀಡೆ)ನ ಪರಿಣಿತರಾದ ಸರ್ಫಿಂಗ್ ಸ್ವಾಮಿ (ಸ್ವಾಮಿ ನರಸಿಂಗ) ಸೋಮವಾರ ಇಲ್ಲಿ ನಿಧನರಾದರು. ಅವರಿಗೆ 76 ವಯಸ್ಸಾಗಿತ್ತು. 
ಸರ್ಫಿಂಗ್ ಸ್ವಾಮಿ
ಸರ್ಫಿಂಗ್ ಸ್ವಾಮಿ

ಮಂಗಳೂರು: ಮಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿ ಸರ್ಫಿಂಗ್‌(ಸಮುದ್ರ ಕ್ರೀಡೆ)ನ ಪರಿಣಿತರಾದ ಸರ್ಫಿಂಗ್ ಸ್ವಾಮಿ (ಸ್ವಾಮಿ ನರಸಿಂಗ) ಸೋಮವಾರ ಇಲ್ಲಿ ನಿಧನರಾದರು. ಅವರಿಗೆ 76 ವಯಸ್ಸಾಗಿತ್ತು.

ಸ್ವಾಮಿ ಅವರು 2004 ರಲ್ಲಿ ಕರಾವಳಿಯ ಮುಲ್ಕಿಯಲ್ಲಿನ ಮಂತ್ರ ಸರ್ಫ್ ಕ್ಲಬ್‌ನ ಸ್ಥಾಪಕರಾಗಿದ್ದರು. ಈ ಕ್ಲಬ್‌ನ ಮೂಲಕ ಅವರು ಈ ಪ್ರದೇಶದ ಅನೇಕ ಯುವಕರಿಗೆ ಸರ್ಫಿಂಗ್‌ನಲ್ಲಿ ತರಬೇತಿ ನೀಡಿದರು.

ಸ್ವಾಮಿಯವರು ನಾಥ್‌ರ್ ಫ್ಲೋರಿಡಾದ ಮೊದಲ ಸರ್ಫ್‍ ಕ್ಲಬ್‍ನ ಸ್ಥಾಪಕ ಸದಸ್ಯರಾಗಿದ್ದರು. ಅಮೆರಿಕದ ಈಸ್ಟ್‍ ಕೋಸ್ಟ್ ನ  ಸರ್ಫಿಂಗ್ ನಲ್ಲಿ ಪರಿಣಿತರಲ್ಲಿ ಒಬ್ಬರಾಗಿದ್ದರು. ದೇಶದಲ್ಲಿ ಸರ್ಫಿಂಗ್ ಅನ್ನು ಮಾನ್ಯತೆ ಪಡೆದ ಕ್ರೀಡೆಯನ್ನಾಗಿಸುವ ಗುರಿಯೊಂದಿಗೆ ತಮ್ಮ ವಿದ್ಯಾರ್ಥಿಗಳೊಂದಿಗೆ ಸೇರಿ ಭಾರತದಲ್ಲಿ ಸರ್ಫಿಂಗ್ ಆಂದೋಲನದ ವಿವಿಧ ಆಯಾಮಗಳಲ್ಲಿ ಸ್ವಾಮಿ ಪರಿಣಿತಿ ಪಡೆದಿದ್ದರು.

ಅನೇಕರ ಬದುಕನ್ನು ಬೆಳಗಿಸಿದ ಸ್ವಾಮಿ ಅವರ ನಿಧನದಿಂದ ತುಂಬಾ ದು:ಖವಾಗಿದೆ ಎಂದು ಸ್ವಾಮಿ ಅವರಿಂದ ತರಬೇತಿ ಪಡೆದ ಮೊದಲ ತಲೆಮಾರಿನ ಸರ್ಫರ್‌ಗಳಲ್ಲಿ ಒಬ್ಬರಾದ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಮಂತ್ರ ಸರ್ಫ್ ಕ್ಲಬ್‌ನ ಮುಖ್ಯ ಬೋಧಕ ಕಿಶೋರ್ ಕುಮಾರ್ ಕಂಬನಿ ಮಿಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com