ಬಾಕ್ಸಿಂಗ್: ಪೂಜಾ ರಾಣಿ, ವಿಕಾಸ್ ಕ್ರಿಶನ್ ಗೆ ಜಯ,ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಜೋಡಿ

ಏಷ್ಯಾ ಚಾಂಪಿಯನ್ ಪೂಜಾ ರಾಣಿ (75 ಕೆಜಿ) ಮತ್ತು ವಿಕಾಸ್ ಕ್ರಿಶನ್ (69 ಕೆಜಿ) ಈ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಬಾಕ್ಸರ್‌ಗಳಾಗಿದ್ದಾರೆ.ಭಾನುವಾರ ಜೋರ್ಡಾನಿನ ಅಮ್ಮನ್ ನಲ್ಲಿ ನಡೆದ ಕ್ರಾರ್ಟರ್ ಫೈನಲ್ಸ್ ನಲ್ಲಿ ಜಯಗಳಿಸಿ ಸೆಮೀಸ್ ಪ್ರವೇಶಿಸುವ ಮೂಲಕ  ಒಲಿಂಪಿಕ್ಸ್‌ಗೆ 
ಪೂಜಾ ರಾಣಿ
ಪೂಜಾ ರಾಣಿ

ನವದೆಹಲಿ: ಏಷ್ಯಾ ಚಾಂಪಿಯನ್ ಪೂಜಾ ರಾಣಿ (75 ಕೆಜಿ) ಮತ್ತು ವಿಕಾಸ್ ಕ್ರಿಶನ್ (69 ಕೆಜಿ) ಈ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಬಾಕ್ಸರ್‌ಗಳಾಗಿದ್ದಾರೆ.ಭಾನುವಾರ ಜೋರ್ಡಾನಿನ ಅಮ್ಮನ್ ನಲ್ಲಿ ನಡೆದ ಕ್ರಾರ್ಟರ್ ಫೈನಲ್ಸ್ ನಲ್ಲಿ ಜಯಗಳಿಸಿ ಸೆಮೀಸ್ ಪ್ರವೇಶಿಸುವ ಮೂಲಕ  ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.

ನಾಲ್ಕನೇ ಶ್ರೇಯಾಂಕಿತ ರಾಣಿ ಥೈಲ್ಯಾಂಡ್‌ನ ಪೋರ್ನಿಪಾ ಚುಟೀ ವಿರುದ್ಧ 5-0 ಗೋಲುಗಳಿಂದ ಜಯ ಸಾಧಿಸಿದರೆ, ಕ್ರಿಶನ್ ಮೂರನೇ ಶ್ರೇಯಾಂಕದ ಜಪಾನಿನ ಸೆವೊನ್ರೆಟ್ಸ್ ಒಕಾಜಾವಾ ವಿರುದ್ಧ ಕಠಿಣ ಹೋರಾಟ ನಡೆಸಿ  5-0 ಅಂತರದ ಜಯ ಗಳಿಸಿದ್ದಾರೆ.

ಆದಾಗ್ಯೂ, ಸಚಿನ್ ಕುಮಾರ್ (81 ಕೆಜಿ) ಚೀನಾದ ರಾಷ್ಟ್ರೀಯ ಚಾಂಪಿಯನ್ ಡಾಕ್ಸಿಂಗ್ ಚೆನ್ ಅವರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡರು. ಆದರೆ ಸೋತ ಕ್ವಾರ್ಟರ್‌ಫೈನಲಿಸ್ಟ್‌ಗಳ ನಡುವೆ ನಡೆಯುವ ಎರಡು ಪಂದ್ಯಗಳ ಬಾಕ್ಸ್-ಆಫ್ ಗೆಲ್ಲಲು ಸಾಧ್ಯವಾದರೆ ಅವರು ಒಲಿಂಪಿಕ್ ಸ್ಥಾನ ಗಟ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com