ಕೊರೋನಾವೈರಸ್ ಭೀತಿ: ಯುರೋ 2020 ಫುಟ್ಬಾಲ್ ಪಂದ್ಯಾವಳಿ ಮುಂದಿನ ವರ್ಷದವರೆಗೆ ಮುಂದೂಡಿಕೆ

ವಿಶ್ವದೆಲ್ಲೆಡೆ ವೇಗವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆ ಪ್ರತಿಷ್ಠಿತ ಯುರೋ 2020 ಫುಟ್‌ಬಾಲ್ ಪಂದ್ಯಾವಳಿಯನ್ನು ಮುಂದಿನ ವರ್ಷದವರೆಗೆ ಮುಂದೂಡಲಾಗಿದೆ. ನಾರ್ವೆ ಫುಟ್ಬಾಲ್ ಫೆಡರೇಶನ್ ಮಂಗಳವಾರ ಈ ಮಾಹಿತಿಯನ್ನು ನೀಡಿದೆ. 
ಯುಇಎಫ್ ಎ
ಯುಇಎಫ್ ಎ

ಓಸ್ಲೋ: ವಿಶ್ವದೆಲ್ಲೆಡೆ ವೇಗವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ಭೀತಿ ಹಿನ್ನೆಲೆ ಪ್ರತಿಷ್ಠಿತ ಯುರೋ 2020 ಫುಟ್‌ಬಾಲ್ ಪಂದ್ಯಾವಳಿಯನ್ನು ಮುಂದಿನ ವರ್ಷದವರೆಗೆ ಮುಂದೂಡಲಾಗಿದೆ. ನಾರ್ವೆ ಫುಟ್ಬಾಲ್ ಫೆಡರೇಶನ್ ಮಂಗಳವಾರ ಈ ಮಾಹಿತಿಯನ್ನು ನೀಡಿದೆ. 

ಫೆಡರೇಶನ್ ಪ್ರಕಾರ, ಈ ಸ್ಪರ್ಧೆಯು ಈಗ ಜೂನ್ 11 ರಿಂದ ಜುಲೈ 11 ರವರೆಗೆ 2021 ರಲ್ಲಿ ನಡೆಯುವ ಸಾಧ್ಯತೆಯಿದೆ.
 ಯುರೋ 2020 ಜೂನ್ ಮತ್ತು ಜುಲೈನಲ್ಲಿ 12 ದೇಶಗಳಲ್ಲಿ ನಡೆಯಬೇಕಿತ್ತು ಮತ್ತು ಅದರ ಸೆಮಿಫೈನಲ್ಸ್ ಮತ್ತು ಫೈನಲ್ ಪಂದ್ಯಗಳನ್ನು ಲಂಡನ್ನಲ್ಲಿ ಆಡಬೇಕಿತ್ತು.

ಈ ಕ್ರಮವು ಪ್ರಸ್ತುತ COVID-19 ತುರ್ತುಸ್ಥಿತಿಯಿಂದಾಗಿ ಸ್ಥಗಿತಗೊಂಡಿರುವ ಎಲ್ಲಾ ದೇಶೀಯ ಸ್ಪರ್ಧೆಗಳನ್ನು ಪೂರ್ಣಗೊಳಿಸಲು ನೆರವಾಗಲಿದೆ ಎಂದು ಫೆಡರೇಶನ್ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com