ಫೆ.17 ರಿಂದ ಮಾ.7 ರವರೆಗೆ ಭಾರತದಲ್ಲಿ ಫಿಫಾ ಮಹಿಳಾ ವಿಶ್ವ ಕಪ್

ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವ ಕಪ್ ಟೂರ್ನಿಯು 2021ರ ಫೆಬ್ರವರಿ 17ರಿಂದ ಮಾರ್ಚ್ 7ರವರೆಗೆ ನಡೆಯಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್ ಎಫ್) ಮತ್ತು ಸ್ಥಳೀಯ ಸಂಘಟನಾ ಸಮಿತಿ (ಎಲ್ ಒಸಿ) ಮಂಗಳವಾರ ಖಚಿತಪಡಿಸಿದೆ. 
ಫಿಫಾ
ಫಿಫಾ

ನವದೆಹಲಿ: ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವ ಕಪ್ ಟೂರ್ನಿಯು 2021ರ ಫೆಬ್ರವರಿ 17ರಿಂದ ಮಾರ್ಚ್ 7ರವರೆಗೆ ನಡೆಯಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್ ಎಫ್) ಮತ್ತು ಸ್ಥಳೀಯ ಸಂಘಟನಾ ಸಮಿತಿ (ಎಲ್ ಒಸಿ) ಮಂಗಳವಾರ ಖಚಿತಪಡಿಸಿದೆ.

ಭಾರತದ ಐದು ನಗರಗಳಲ್ಲಿನವೆಂಬರ್ 2ರಿಂದ 21ರವರೆಗೆ ನಿಗದಿಯಾಗಿದ್ದ ಮಹಿಳಾ ವಿಶ್ವ ಕಪ್ ಟೂರ್ನಿಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣ ಮುಂದೂಡಲಾಗಿತ್ತು. 

''ಇದೀಗ ಭಾರತದಲ್ಲಿ ನಡೆಯಬೇಕಿದ್ದ 2020ರ ಫಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವ ಕಪ್ ಟೂರ್ನಿಯ ಹೊಸ ದಿನಾಂಕ ಕುರಿತು ಎಐಎಫ್ ಎಫ್ ಮತ್ತು ಎಲ್ ಒಸಿ ಮಂಗಳವಾರ ಖಚಿತಪಡಿಸಿವೆ ಎಂದು ಫಿಫಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೆಯೇ ಈ ಟೂರ್ನಿಯು 2021ರ ಫೆಬ್ರವರಿ 17ರಿಂದ ಮಾರ್ಚ್ 7ರವರೆಗೆ ನಡೆಯಲಿದೆ, '' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಯುಇಎಫ್‌ಎ, ಕಾನ್‌ಕಾಕ್ಯಾಫ್, ಸಿಎಎಫ್, ಒಎಫ್‌ಸಿ ಮತ್ತು ಕಾನ್ಮೆಬೋಲ್ ಅರ್ಹತಾ ಪಂದ್ಯಾವಳಿಗಳನ್ನು ಪೂರ್ಣಗೊಳಿಸಲು ಬೇಕಾದ ಸಮಯವನ್ನು ಗಣನೆಗೆ ತೆಗೆದುಕೊಂಡ ಬಳಿಕ ಪರಿಷ್ಕೃತ ದಿನಾಂಕವನ್ನು ದೃಢಪಡಿಸಲಾಗಿದ್ದು, ಯಶಸ್ವಿ ಫಿಫಾ ಮಹಿಳಾ ವಿಶ್ವ ಆಯೋಜನೆಗೆ ದೇಶದ ಅತ್ಯುತ್ತಮ ಸಮಯ ಇದಾಗಿದೆ, " ಎಂದು ಫಿಫಾ ಹೇಳಿದೆ.

ನವಿ ಮುಂಬಯಿ, ಗುವಾಹಟಿ, ಅಹಮದಾಬಾದ್, ಕೋಲ್ಕೊತಾ ಮತ್ತು ಭುವನೇಶ್ವರ್ ನಗರಗಳಲ್ಲಿ 17 ವರ್ಷದೊಳಗಿನವರ ಮಹಿಳಾ ವಿಶ್ವ ಕಪ್ ನಿಗದಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com