ಹಾಕಿ ಇಂಡಿಯಾ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾ ದೃಢ,  ಪ್ರಧಾನ ಕಚೇರಿ 14 ದಿನ ಸೀಲ್ ಡೌನ್

ಭಾರತದ ಹಾಕಿ ಇಂಡಿಯಾ ಪ್ರಧಾನ ಕಚೇರಿಯ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರ ಹಾಕಿ ಇಂಡಿಯಾದ ಕಚೇರಿ ಎರಡು ವಾರಗಳವರೆಗೆ ಮುಚ್ಚಲ್ಪಡುತ್ತದೆ ಎಂದು ಪ್ರಕಟಣೆ ಹೇಳಿದೆ.
ಹಾಕಿ ಇಂಡಿಯಾ
ಹಾಕಿ ಇಂಡಿಯಾ

ನವದೆಹಲಿ: ಭಾರತದ ಹಾಕಿ ಇಂಡಿಯಾ ಪ್ರಧಾನ ಕಚೇರಿಯ ಇಬ್ಬರು ಸಿಬ್ಬಂದಿಗಳಿಗೆ ಕೊರೋನಾವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರ ಹಾಕಿ ಇಂಡಿಯಾದ ಕಚೇರಿ ಎರಡು ವಾರಗಳವರೆಗೆ ಮುಚ್ಚಲ್ಪಡುತ್ತದೆ ಎಂದು ಪ್ರಕಟಣೆ ಹೇಳಿದೆ.

31 ಉದ್ಯೋಗಿಗಳಲ್ಲಿ 29 ಮಂದಿಯನ್ನು ಪರೀಕ್ಷಿಸಲಾಗಿದ್ದು ಇಬ್ಬರನ್ನು ಹೊರತು ಇನ್ನಿಬ್ಬರ ವರದಿ ಇನ್ನೂ ದೃಢಪಟ್ಟಿಲ್ಲ. ಅವರಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ. ಇನ್ನು ನೆಗೆಟಿವ್ ವರದಿ ಬಂದಿರುವ 25 ಜನರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೀನ್​ನಲ್ಲಿರುವಂತೆ ಸೂಚಿಸಲಾಗಿದೆ.

ಕೊರೋನಾ ದೃಢಪಟ್ಟ ಇಬ್ಬರು ಉದ್ಯೋಗಿಗಳ ಪೈಕಿ ಒಬ್ಬರು  ಲೆಕ್ಕಪತ್ರ ವಿಭಾಗದ ಒಬ್ಬ ಸಿಬ್ಬಂದಿಯಾಗಿದ್ದರೆ ಇನ್ನೊಬ್ಬರು ಕಿರಿಯ ಫೀಲ್ಡ್ ಆಫೀಸರ್​ ಆಗಿದ್ದಾರೆ.

14 ದಿನಗಳ ಕಾಲಕಚೇರಿ ಮುಚ್ಚುವ ಬಗ್ಗೆ  ಹಾಕಿ ಇಂಡಿಯಾ ಅಧ್ಯಕ್ಷ ಮುಷ್ತಾಕ್ ಅಹ್ಮದ್ ಅವರಿಗೆ ಮಾಹಿತಿ ನೀಡಲಾಗಿದೆ.ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಮತ್ತು ರಾಜ್ಯ ಒಲಿಂಪಿಕ್ ಸಂಘಗಳು ತಮ್ಮ ನೌಕರರನ್ನು "ಯಾವುದೇ ವಿಳಂಬವಿಲ್ಲದೆ" ಮಾರಕ ವೈರಸ್‌ ಪರೀಕ್ಷೆ ನಡೆಸಬೇಕೆಂದು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧ್ಯಕ್ಷ ನರಿಂದರ್ ಬಾತ್ರಾ  ಹೇಳಿದ್ದಾರೆ.

ಭಾರತದಲ್ಲಿ ಈವರೆಗೆ 1.7 ಲಕ್ಷಕ್ಕೂ ಹೆಚ್ಚುಕೋವಿಡ್  -19 ಪ್ರಕರಣಗಳು ವರದಿಯಾಗಿದ್ದು, ಸುಮಾರು 5000 ಜನರು ಪ್ರಾಣ ಕಳೆದುಕೊಂಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com