ನವದೆಹಲಿ: ಟೋಕಿಯೊದಲ್ಲಿ ನಡೆಯಲಿರುವ 32 ನೇ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಅಂಪೈರ್ ಆಗಿ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ ಬ್ಲೂ ಬ್ಯಾಡ್ಜ್ ಇಂಟರ್ನ್ಯಾಷನಲ್ ಅಂಪೈರ್ ಜೀವನ್ ಬಲ್ಲವ್ ಸಮಲ್ ಅವರನ್ನು ನೇಮಿಸಿದೆ.
ಜೀವನ್ ಬಲ್ಲವ್ ಸಮಲ್ ಅವರು ಅಂಚೆ ಇಲಾಖೆಯಲ್ಲಿ ಬಿಸಿನೆಸ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಪ್ರಸ್ತುತ ಕಟಕ್‌ನಲ್ಲಿ ನೇಮಕಗೊಂಡಿದ್ದಾರೆ ಎಂಬುದು ಗಮನಾರ್ಹ. ಪ್ಯಾರಾಲಿಂಪಿಕ್ಸ್ 2020ರಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಏಕೈಕ ಟೇಬಲ್ ಟೆನಿಸ್ ಅಧಿಕಾರಿ ಸಮಲ್. ಈ ಹಿಂದೆ ಜೀವನ್ ಬಲ್ಲವ್ ಹಲವು ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಪ್ಯಾರಾಲಿಂಪಿಕ್ಸ್ 2020 ಕ್ಕೆ ಜೀವನ್ ಬಲ್ಲವ್ ಅವರಿಗೆ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ಪರವಾಗಿ ಒಡಿಶಾ ರಾಜ್ಯ ಟೇಬಲ್ ಟೆನಿಸ್ ಅಸೋಸಿಯೇಶನ್ ನ ಕಾರ್ಯದರ್ಶಿ ಆರ್.ಕೆ.ಪರಿದಾ ಅಭಿನಂದನೆ ಸಲ್ಲಿಸಿದ್ದಾರೆ.
32 ನೇ ಪ್ಯಾರಾಲಿಂಪಿಕ್ ಕ್ರೀಡಾಕೂಟವು ಆಗಸ್ಟ್ 24 ರಿಂದ ಸೆಪ್ಟೆಂಬರ್ 5 ರವರೆಗೆ ಟೋಕಿಯೊ ಮೆಟ್ರೋಪಾಲಿಟನ್ ಜಿಮ್ನಾಷಿಯಂನಲ್ಲಿ ನಡೆಯಲಿದೆ.
Advertisement