ಟೋಕಿಯೋ ಒಲಿಂಪಿಕ್ಸ್: ಈ ಮೂವರು ಕ್ರೀಡಾಪಟುಗಳು ಕರ್ನಾಟಕದ ಭರವಸೆ

ಈ ಬಾರಿ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಅತಿಹೆಚ್ಚು ಅಥ್ಲೀಟ್‌ಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.
ಫೌಹಾದ್‌ ಮಿರ್ಜಾ
ಫೌಹಾದ್‌ ಮಿರ್ಜಾ

ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಅತಿಹೆಚ್ಚು ಅಥ್ಲೀಟ್‌ಗಳು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಇನ್ನು ಕರ್ನಾಟಕದ ಮೂವರು ಕ್ರೀಡಾಪಟುಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದು, ಅವರ ಕಿರು ಪರಿಚಯ ಇಲ್ಲಿದೆ.

ಅದಿತಿ ಅಶೋಕ್‌
ಅದಿತಿ ಅವರು ಭರವಸೆಯ ವೃತ್ತಿಪರ ಗಾಲ್ಫ್ ಆಟಗಾರರಾಗಿದ್ದು, ಅವರು 2016ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಈಗ 2ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದು, ನೇರವಾಗಿ ಅರ್ಹತೆ ಪಡೆದ 60 ಆಟಗಾರರು ಪೈಕಿ ಒಬ್ಬರು ಎನ್ನುವ ಹಿರಿಮೆ ಅದಿತಿ ಅವರದ್ದು. ಈಗಾಗಲೇ ಅದಿತಿ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸಿರುವ ಅನುಭವ ಹೊಂದಿದ್ದಾರೆ.

ಏಷ್ಯನ್ ಯೂತ್ ಗೇಮ್ಸ್ (2013), ಯೂತ್ ಒಲಿಂಪಿಕ್ ಗೇಮ್ಸ್ (2014), ಏಷ್ಯನ್ ಗೇಮ್ಸ್ (2014) ಮತ್ತು ಒಲಿಂಪಿಕ್ ಗೇಮ್ಸ್ (2016) ಆಡಿದ ಮೊದಲ ಮತ್ತು ಏಕೈಕ ಭಾರತೀಯ ಗಾಲ್ಫ್ ಆಟಗಾರ್ತಿ ಅದಿತಿ.

ಫೌಹಾದ್‌ ಮಿರ್ಜಾ
ಮಿರ್ಜಾ ಅವರು ಒಲಿಂಪಿಕ್ಸ್‌ ರ‍್ಯಾಂಕಿಂಗ್‌ನ ‘ಜಿ’ ಗುಂಪಿನಲ್ಲಿ (ಆಗ್ನೇಯ ಏಷ್ಯಾ-ಓಷಿಯಾನಿಯಾ) ಅಗ್ರ 2ರಲ್ಲಿ ಸ್ಥಾನ ಪಡೆದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಎರಡು ದಶಕಗಳ ಬಳಿಕ ಈಕ್ವೆಸ್ಟ್ರಿಯನ್‌ನಲ್ಲಿ ಭಾರತಕ್ಕೆ ಒಲಿಂಪಿಕ್ಸ್‌ ಅರ್ಹತೆ ಗಳಿಸಿಕೊಟ್ಟ ಕೀರ್ತಿ ಫೌಹಾದ್‌ ಮಿರ್ಜಾ ಅವರದ್ದು.

2018ರ ಏಷ್ಯನ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಮತ್ತು ತಂಡ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕಗಳನ್ನು ಗೆದ್ದ ಕುದುರೆ ಸವಾರಿ ಮಿರ್ಜಾ. ಏಷ್ಯನ್ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಮಿರ್ಜಾ ಅವರು ಎರಡು ಬೆಳ್ಳ ಪದಕಗಳನ್ನು ಗೆದ್ದಿದ್ದಾರೆ.

ಶ್ರೀಹರಿ ನಟರಾಜ್‌
ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಈಜು ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿರುವ ಶ್ರೀಹರಿ ನಟರಾಜ್‌ ಅವರು ಕೊನೆ ಕ್ಷಣದಲ್ಲಿ ‘ಎ’ ವಿಭಾಗದ ಸಮಯ ಸಾಧಿಸಿ ಟೋಕಿಯೋ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದಿದ್ದಾರೆ.

ಶ್ರೀಹರಿ ಅವರು ಗ್ವಾಂಗ್ಜುವಿನಲ್ಲಿ ನಡೆದ 2019 ರ ವಿಶ್ವ ಅಕ್ವಾಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

2017 ರಲ್ಲಿ ತುರ್ಕಮೆನಿಸ್ತಾನದ ಅಶ್ಗಾಬತ್‌ನಲ್ಲಿ ನಡೆದ 2017 ರ ಏಷ್ಯನ್ ಒಳಾಂಗಣ ಮತ್ತು ಮಾರ್ಷಲ್ ಆರ್ಟ್ಸ್ ಕ್ರೀಡಾಕೂಟದಲ್ಲಿ ಶ್ರೀಹರಿ, ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಮತ್ತು 

2018 ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com