ಟೋಕಿಯೊ: ಅನುಭವಿ ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಭರ್ಜರಿ ಪ್ರದರ್ಶನ ನೀಡಿದ್ದು ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.
ಸೋಮವಾರ ಟೋಕಿಯೊ ಮೆಟ್ರೋಪಾಲಿಟನ್ ಜಿಮ್ನಾಷಿಯಂನಲ್ಲಿ ನಡೆದ ಶರತ್ 2-11, 11-8, 11-5, 9-11, 11-6, 11-9 ರಿಂದ ಟಿಯಾಗೊ ಅಪೊಲೊನಿಯಾ ವಿರುದ್ಧ ಜಯ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.
ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತದ ಪದಕದ ಆಸೆ ದಿನ ಕಳೆದಂತೆ ಕಡಿಮೆಯಾಗುತ್ತಿದೆ. ಭರವಸೆ ಮೂಡಿಸಿದ್ದ ಆಟಗಾರರು ಪರಾಭವ ಅನುಭವಿಸುತ್ತಿದ್ದಾರೆ. ಅದ್ಭುತ ಪ್ರದರ್ಶನ ನೀಡುತ್ತಿದ್ದ ಭಾರತದ ಸ್ಟಾರ್ ಪ್ಯಾಡ್ಲರ್ ಮನಿಕಾ ಬಾತ್ರಾ ಪರಾಭವಗೊಂಡಿದ್ದಾರೆ. ಟೇಬಲ್ ಟೆನ್ನಿಸ್ ನ ಮಹಿಳೆಯರ ಸಿಂಗಲ್ ವಿಭಾಗದ 3ನೇ ಸುತ್ತಿನಲ್ಲಿ ಆಸ್ಟ್ರೀಯಾದ ಸೋಫಿಯಾ ವಿರುದ್ಧ 0-4 ಸೆಟ್ ಗಳಿಂದ ಸೋಲು ಅನುಭವಿಸಿದ್ದಾರೆ.
ಇದೇ ವೇಳೆ ಸುತೀರ್ಥಾ ಮುಖರ್ಜಿ ಸಹ ಎರಡನೇ ಸುತ್ತಿನಲ್ಲಿ ಪೋರ್ಚುಗಲ್ ನ ಫು ಹು ವಿರುದ್ಧ ಸೋಲು ಅನುಭವಿಸಿದರು.
Advertisement