ಟೋಕಿಯೊ ಒಲಂಪಿಕ್ಸ್; 3000 ಮೀಟರ್‌ ಸ್ಟೀಪಲ್‌ಚೇಸ್​ ಫೈನಲ್​ನಿಂದ ಹೊರ ಬಿದ್ದರೂ ದಾಖಲೆ ಬರೆದ ಅವಿನಾಶ್​ ಸಾಬ್ಲೆ!

2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದ್ದ ಭಾರತದ ಅಥ್ಲೀಟ್‌ ಅವಿನಾಶ್‌ ಸಾಬ್ಲೆ ಪುರುಷರ 3000 ಮೀಟರ್‌ ಸ್ಟೀಪಲ್‌ಚೇಸ್​ ಓಟದಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
ಅವಿನಾಶ್​ ಸಾಬ್ಲೆ
ಅವಿನಾಶ್​ ಸಾಬ್ಲೆ

ಟೋಕಿಯೋ: 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದ್ದ ಭಾರತದ ಅಥ್ಲೀಟ್‌ ಅವಿನಾಶ್‌ ಸಾಬ್ಲೆ ಪುರುಷರ 3000 ಮೀಟರ್‌ ಸ್ಟೀಪಲ್‌ಚೇಸ್​ ಓಟದಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

3000 ಮೀ ದೂರವನ್ನು 8:18.2 ನಿಮಿಷಗಳಲ್ಲಿ ಕ್ರಮಿಸುವುದರ ಮೂಲಕ ಅವಿನಾಶ್ ಮುಕುಂದ್ ಸಾಬ್ಲೆ ಈ ಹಿಂದೆ ತಾವು ನಿರ್ಮಿಸಿದ್ದ ದಾಖಲೆಯೊಂದನ್ನು ತಾವೇ ಮುರಿದುಕೊಂಡಿದ್ದಾರೆ. ಹಾಗೂ ಈ ಸುತ್ತಿನಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವುದರ ಮೂಲಕ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ.

ಮೊದಲ 1000 ಮೀ. ದೂರವನ್ನು 2:46.6 ನಿಮಿಷಕ್ಕೆ ತಲುಪಿದ ಅವಿನಾಶ್ ಸಾಬ್ಲೆ 2000 ಮೀಟರ್‌ನ್ನು 5:33.6 ನಿಮಿಷಕ್ಕೆ ತಲುಪಿದರು ಹಾಗೂ ಕೊನೆಯ ಮತ್ತು ಮೂರನೇ ಸುತ್ತಾದ 3000 ಮೀಟರ್ ದೂರವನ್ನು ಅವಿನಾಶ್ ಸಬ್ಲೆ 8:18.2 ನಿಮಿಷಗಳಲ್ಲಿ ಕ್ರಮಿಸಿ 7ನೇ ಸ್ಥಾನ ಪಡೆದುಕೊಂಡರು. 

ಈ ಮೂಲಕ ಅವಿನಾಶ್ ಸಬ್ಲೆ ಮಾರ್ಚ್ ತಿಂಗಳಿನಲ್ಲಿ ನಡೆದಿದ್ದ ಫೆಡರೇಷನ್ ಕಪ್ ಟೂರ್ನಿಯಲ್ಲಿ ತಾವು ನಿರ್ಮಿಸಿದ್ದ ದಾಖಲೆಯನ್ನು ತಾವೇ ಮುರಿದು ಹಾಕಿದ್ದಾರೆ. 

ಫೆಡರೇಷನ್ ಕಪ್ ಟೂರ್ನಿಯಲ್ಲಿ ಅವಿನಾಶ್ ಸಾಬ್ಲೆ 3000 ಮೀ. ಸ್ಟೀಪಲ್‌ಚೇಸ್ ಸ್ಪರ್ಧೆಯನ್ನು 8:20.20 ನಿಮಿಷಗಳಲ್ಲಿ ಪೂರೈಸಿದ್ದರು. ಆದರೆ ಈಗ ಅದೇ ಅಂತರವನ್ನು 8:18.2 ನಿಮಿಷಗಳಲ್ಲಿ ಪೂರೈಸುವುದರ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದು ಹಾಕಿದ್ದಾರೆ.

ಭಾರ​ತೀಯ ಸೇನೆಯಲ್ಲಿ ಕಾರ್ಯ​ನಿ​ರ್ವ​ಹಿ​ಸು​ತ್ತಿ​ರುವ ಮಹಾ​ರಾಷ್ಟ್ರ ಮೂಲದ 25 ವರ್ಷದ ಅವಿ​ನಾಶ್‌, 2013-14ರಲ್ಲಿ ಸಿಯಾ​ಚಿನ್‌ನಲ್ಲಿ ಸೇವೆ ಸಲ್ಲಿ​ಸಿದ್ದರು. ರಾಜ​ಸ್ಥಾ​ನ, ಸಿಕ್ಕಿಂನಲ್ಲೂ ಅವರು ಸೇವೆ ಸಲ್ಲಿ​ಸಿ​ದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com