ಟೋಕಿಯೊ ಒಲಂಪಿಕ್ಸ್: ಆರ್ಚರ್ ದೀಪಿಕಾ ಕುಮಾರಿಗೆ ಭರ್ಜರಿ ಜಯ, ಕ್ವಾರ್ಟರ್ ಫೈನಲ್ ಪ್ರವೇಶ!

ಟೋಕಿಯೊ ಒಲಂಪಿಕ್ಸ್‌ನ 8ನೇ ದಿನವಾದ ಶುಕ್ರವಾರ (ಜು.30) ಭಾರತದ ದೀಪಿಕಾ ಕುಮಾರಿ ಮಹಿಳಾ ಸಿಂಗಲ್ಸ್ ಆರ್ಚರಿ ಪಂದ್ಯವೊಂದರಲ್ಲಿ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ.
ಆರ್ಚರ್ ದೀಪಿಕಾ ಕುಮಾರಿ
ಆರ್ಚರ್ ದೀಪಿಕಾ ಕುಮಾರಿ
Updated on

ಟೋಕಿಯೊ: ಟೋಕಿಯೊ ಒಲಂಪಿಕ್ಸ್‌ನ 8ನೇ ದಿನವಾದ ಶುಕ್ರವಾರ (ಜು.30) ಭಾರತದ ದೀಪಿಕಾ ಕುಮಾರಿ ಮಹಿಳಾ ಸಿಂಗಲ್ಸ್ ಆರ್ಚರಿ ಪಂದ್ಯವೊಂದರಲ್ಲಿ ಗೆಲುವು ಸಾಧಿಸುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶ ಮಾಡಿದ್ದಾರೆ.

ರಷ್ಯಾ ಒಲಿಂಪಿಕ್ ಕಮಿಟಿಯ ಆಟಗಾರ್ತಿ ಕ್ಸೆನಿಯಾ ಪೆರೋವಾ ವಿರುದ್ಧ ದೀಪಿಕಾ ಕುಮಾರಿ ಜಯ ಸಾಧಿಸಿದ್ದಾರೆ. 

ರಷ್ಯಾ ಒಲಿಂಪಿಕ್ ಕಮಿಟಿಯ ಕ್ಸೆನಿಯಾ ಪೆರೋವಾ ವಿರುದ್ಧ 6-5 ಅಂತರದಲ್ಲಿ ದೀಪಿಕಾ ಕುಮಾರಿ ಜಯ ಸಾಧಿಸಿದರು. 

ಮೊದಲು ನಡೆದ 5 ಸುತ್ತುಗಳಲ್ಲಿ ಕ್ಸೆನಿಯಾ ವಿರುದ್ಧ ದೀಪಿಕಾ ಕುಮಾರಿ 28-25, 26-27, 28-27, 26-26 ಹಾಗೂ 25-28 ಅಂಕಗಳನ್ನು ಗಳಿಸಿದರು. ಈ ಮೂಲಕ ಇಬ್ಬರ ನಡುವಿನ ಪಂದ್ಯದಲ್ಲಿ ಸಮಬಲ ಬಂದ ಕಾರಣ ಮತ್ತೊಂದು ಅತ್ಯಧಿಕ ಶೂಟ್ ಆಫ್ ಸುತ್ತನ್ನು ಆಯೋಜಿಸಲಾಯಿತು. 

ಈ ಶೂಟ್ ಆಫ್ ಸುತ್ತಿನಲ್ಲಿ ಕ್ಸೆನಿಯಾ ಪೆರೋವಾಗಿಂತ ಹೆಚ್ಚು ಅಂಕಗಳನ್ನು ಗಳಿಸಿದ ದೀಪಿಕಾ ಕುಮಾರಿ ಪಂದ್ಯವನ್ನು ಗೆಲ್ಲುವುದರ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶವನ್ನು ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com