ಲಿಯೋನೆಲ್ ಮೆಸ್ಸಿ ದಾಖಲೆ ಮುರಿದ ಸುನಿಲ್ ಚೆಟ್ರಿ!

ದೋಹಾದಲ್ಲಿ ಬಾಂಗ್ಲಾದೇಶ ವಿರುದ್ಧ 2-0 ಗೋಲುಗಳಿಂದ ಜಯಗಳಿಸಿದ ಭಾರತದ ಸುನಿಲ್ ಚೆಟ್ರಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರನ್ನು ಹಿಂದಿ ಸಕ್ರಿಯ ಆಟಗಾರರ ಪೈಕಿ ಎರಡನೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್ ಗಳಿಸಿದ ಫುಟ್ಬಾಲ್ ಪಟು ಎಂದೆನಿಸಿದರು. ಚೆಟ್ರಿ 74 ಗೋಲುಗಳೊಂದಿಗೆ ಈ ಸಾಧನೆ ಮಾಡಿದ್ದಾರೆ.
ಸುನಿಲ್ ಚೆಟ್ರಿ
ಸುನಿಲ್ ಚೆಟ್ರಿ

ದೋಹಾ: ದೋಹಾದಲ್ಲಿ ಬಾಂಗ್ಲಾದೇಶ ವಿರುದ್ಧ 2-0 ಗೋಲುಗಳಿಂದ ಜಯಗಳಿಸಿದ ಭಾರತದ ಸುನಿಲ್ ಚೆಟ್ರಿ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರನ್ನು ಹಿಂದಿ ಸಕ್ರಿಯ ಆಟಗಾರರ ಪೈಕಿ ಎರಡನೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್ ಗಳಿಸಿದ ಫುಟ್ಬಾಲ್ ಪಟು ಎಂದೆನಿಸಿದರು. ಚೆಟ್ರಿ 74 ಗೋಲುಗಳೊಂದಿಗೆ ಈ ಸಾಧನೆ ಮಾಡಿದ್ದಾರೆ.

ಫಿಫಾ 2022 ರ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಭಾರತಕ್ಕೆ ಮೊದಲ ಗೆಲುವು ದಾಖಲಿಸಲು ಸಹಾಯ ಮಾಡಿದ 36 ವರ್ಷದ ಸ್ಟ್ರೈಕರ್ ಅಂತರರಾಷ್ಟ್ರೀಯ ಗೋಲ್ ಗಳಿಸಿದ ಸಕ್ರಿಯ ಕ್ರೀಡಾಪಋಗಳ ಪಟ್ಟಿಯಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (103) ನಂತರದ ಸ್ಥಾನದಲ್ಲಿದ್ದಾರೆ.

ಸಾರ್ವಕಾಲಿಕ ಗೋಲು ಗಳಿಸಿದ ಪುರುಷರ ಪಟ್ಟಿಯಲ್ಲಿ ಚೆಟ್ರಿ  ಕೂಡ ಸ್ಥಾನ ಪಡೆದಿದ್ದಾರೆ ಮತ್ತು ಈಗ 11 ನೇ ಸ್ಥಾನದಲ್ಲಿದ್ದಾರೆ. ಅವರು ಹಂಗೇರಿಯ ಸ್ಯಾಂಡರ್‌ ಕೊಕ್ಸಿಸ್‌, ಜಪಾನ್‌ನ ಕುನಿಶಿಜ್ ಕಮಾಮೊತೋ ಮತ್ತು ಕುವೈತ್‌ನ ಬಶರ್ ಅಬ್ದುಲ್ಲಾ ಅವರುಗಳ ನಂತರದಲ್ಲಿದ್ದಾರೆ. ಈ ಮೇಲಿನ ಮೂವರೂ 75 ಗೋಲುಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

ಕಳೆದ ವಾರ ಮಲೇಷ್ಯಾ ವಿರುದ್ಧ ಗೋಲು ಗಳಿಸಿದ ನಂತರ ಯುಎಇಯ ಅಲಿ ಮಾಬ್ಖೌತ್ 73ನೇ ಗೋಲು ದಾಖಲಿಸಿದ್ದರು. . ಮತ್ತೊಂದೆಡೆ, ಮೆಸ್ಸಿ ಕಳೆದ ಗುರುವಾರ ಚಿಲಿ ವಿರುದ್ಧ ತನ್ನ 72 ನೇ ಅಂತರರಾಷ್ಟ್ರೀಯ ಗೋಲು ಗಳಿಸಿದರು.

ದೋಹಾದ ಜಾಸಿಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಜಂಟಿ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಸುನಿಲ್ ಚೆಟ್ರಿ ಟೀಂ ಬಾಂಗ್ಲಾದೇಶ ವಿರುದ್ಧ 2-0 ಗೋಲುಗಳಿಂದ ಜಯಗಳಿಸಿದೆ. ಆರು ವರ್ಷಗಳಲ್ಲಿ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಗಳಲ್ಲಿ ಇದು ಭಾರತ ಮೊದಲ ಜಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com