100 ಮೀ ಮತ್ತು 200 ಮೀಟರ್ ಓಟಗಳಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಡುಟಿ ಚಂದ್

ಏಸ್ ಇಂಡಿಯನ್ ಸ್ಪ್ರಿಂಟರ್ ಡುಟಿ ಚಂದ್ ವಿಶ್ವ ಶ್ರೇಯಾಂಕದ ಕೋಟಾ ಮೂಲಕ 100 ಮೀ ಮತ್ತು 200 ಮೀ ಓಟಗಳಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಡುಟಿ ಚಂದ್
ಡುಟಿ ಚಂದ್

ನವದೆಹಲಿ: ಏಸ್ ಇಂಡಿಯನ್ ಸ್ಪ್ರಿಂಟರ್ ಡುಟಿ ಚಂದ್ ವಿಶ್ವ ಶ್ರೇಯಾಂಕದ ಕೋಟಾ ಮೂಲಕ 100 ಮೀ ಮತ್ತು 200 ಮೀ ಓಟಗಳಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ವಿಶ್ವ ಶ್ರೇಯಾಂಕದ ಮಾರ್ಗದ ಮೂಲಕ 100 ಮೀಟರ್‌ನಲ್ಲಿ 22 ಮತ್ತು 200 ಮೀಟರ್‌ನಲ್ಲಿ 15 ತಾಣಗಳು ಲಭ್ಯವಿತ್ತು. ಚಾಂದ್ 100 ಮೀಟರ್ನಲ್ಲಿ ವಿಶ್ವದ 44ನೇ ಸ್ಥಾನ ಮತ್ತು 200 ಮೀಟರ್ನಲ್ಲಿ ವಿಶ್ವ 51ನೇ ಸ್ಥಾನದಲ್ಲಿದ್ದಾರೆ. ಹೀಗಾಗಿ ಮುಂದಿನ ತಿಂಗಳು ಟೋಕಿಯೊಗೆ ಹಾರಲು ಅರ್ಹತೆ ಗಳಿಸಿದ್ದಾರೆ.

ನಡೆಯುತ್ತಿರುವ 60ನೇ ರಾಷ್ಟ್ರೀಯ ಅಂತರ್-ರಾಜ್ಯ ಹಿರಿಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 100 ಮೀ ಫೈನಲ್‌ನಲ್ಲಿ ನಿರಾಶಾದಾಯಕ ನಾಲ್ಕನೇ ಸ್ಥಾನ ಗಳಿಸಿಸುವ ಮೂಲಕ ಡುಟಿ ಚಂದ್ ನೇರ ಒಲಿಂಪಿಕ್ ಅರ್ಹತಾ ಸ್ಥಾನವನ್ನು ಗಳಿಸುವಲ್ಲಿ ವಿಫಲರಾಗಿದ್ದರು.

ಕಳೆದ ವಾರ ಪಟಿಯಾಲಾದಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್(ಐಜಿಪಿ) 4ರಲ್ಲಿ 11.17 ಸೆಕೆಂಡುಗಳ ಸಮಯದೊಂದಿಗೆ ಮಹಿಳಾ 100 ಮೀಟರ್ ಓಟದಲ್ಲಿ ಡುಟಿ ಹೊಸ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದರು. ಆದರೆ ಒಲಿಂಪಿಕ್ ಅರ್ಹತಾ ಸಮಯವನ್ನು ಕೇವಲ 0.02 ಸೆಕೆಂಡುಗಳಿಂದ ತಪ್ಪಿಸಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com