ಸಂಗ್ರಹ ಚಿತ್ರ
ಕ್ರೀಡೆ
ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಭಾರತಕ್ಕೆ ಮತ್ತೆ 4 ಪದಕ ಖಚಿತ
ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಭಾರತೀಯ ಬಾಕ್ಸರ್‌ಗಳು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ದುಬೈ: ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಭಾರತೀಯ ಬಾಕ್ಸರ್‌ಗಳು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ತಡರಾತ್ರಿ ಜಯಗಳಿಸಿದ ನಂತರ ಸಂಜೀತ್ ಕುಮಾರ್ (91 ಕೆಜಿ), ಸಾಕ್ಷಿ ಮಲಿಕ್ (54 ಕೆಜಿ), ಜೈಸ್ಮೈನ್ (57 ಕೆಜಿ) ಮತ್ತು ಒಲಿಂಪಿಕ್ ಅರ್ಹತೆ ಪಡೆದ ಸಿಮ್ರಾಂಜಿತ್ ಕೌರ್ (60 ಕೆಜಿ) ಅಂತಿಮ ನಾಲ್ಕರ ಘಟ್ಟ ತಲುಪಿದ್ದಾರೆ.
ಶಿವ ಥಾಪಾ (64 ಕೆಜಿ) ಇದಾಗಲೇ ಸೆಮೀಸ್ ತಲುಪಿದ್ದು ಆರು ಬಾರಿ ವಿಶ್ವ ಚಾಂಪಿಯನ್ ಎಂಸಿ ಮೇರಿ ಕೋಮ್ (51 ಕೆಜಿ) ಸೇರಿ ಏಳು ಪದಕಗಳನ್ನು ಗಳಿಸಿಉವುದು ಖಚಿತವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ