ಅಮಿತ್ ಪಂಗಲ್
ಅಮಿತ್ ಪಂಗಲ್

ಏಷ್ಯನ್ ಬಾಕ್ಸಿಂಗ್: ಸೆಮಿಸ್ ಗೆ ಪಂಗಲ್, ವಿಕಾಸ್; ಭಾರತಕ್ಕೆ 15 ಪದಕ ಖಚಿತ

ಹಾಲಿ ಚಾಂಪಿಯನ್ ಅಮಿತ್ ಪಂಗಲ್(52 ಕೆ.ಜಿ) ಹಾಗೂ ಸ್ಟಾರ್ ಬಾಕ್ಸರ್ ವಿಕಾಸ್ ಕೃಷ್ಣ(69 ಕೆ.ಜಿ) ಅವರು ಬುಧವಾರ ತಡ ರಾತ್ರಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಕ್ವಾರ್ಟರ್ ಫೈನಲ್ಸ್ ನಲ್ಲಿ ಜಯ ಸಾಧಿಸಿ, ಪದಕದ ಆಸೆ ಚಿಗುರಿಸಿದ್ದಾರೆ.

ದುಬೈ: ಹಾಲಿ ಚಾಂಪಿಯನ್ ಅಮಿತ್ ಪಂಗಲ್(52 ಕೆಜಿ) ಹಾಗೂ ಸ್ಟಾರ್ ಬಾಕ್ಸರ್ ವಿಕಾಸ್ ಕೃಷ್ಣ(69 ಕೆಜಿ) ಅವರು ಬುಧವಾರ ತಡ ರಾತ್ರಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಕ್ವಾರ್ಟರ್ ಫೈನಲ್ಸ್ ನಲ್ಲಿ ಜಯ ಸಾಧಿಸಿ, ಪದಕದ ಆಸೆ ಚಿಗುರಿಸಿದ್ದಾರೆ. ಈ ಮೂಲಕ ಚಾಂಪಿಯನ್ ಶಿಪ್ ನಲ್ಲಿ ಭಾರತ 15 ಪದಕ ಖಚಿತ ಪಡಿಸಿದೆ.

ಇದೆ ಮೊದಲ ಬಾರಿಗೆ ಚಾಂಪಿಯನ್ ಶಿಪ್ ನಲ್ಲಿ ಆಡುತ್ತಿರುವ ವೀರೇಂದ್ರ ಸಿಂಗ್ (60 ಕೆ.ಜಿ) ವಿಭಾಗದಲ್ಲಿ ನಾಲ್ಕರ ಘಟಕ್ಕೆ ಪ್ರವೇಶ ಪಡೆದಿದ್ದಾರೆ. ವೀರೇಂದ್ರ 5-0 ಯಿಂದ ಜೆರೆ ಸ್ಯಾಮ್ಯುಯೆಲ್ ಡೆಲಾ ಕ್ರೂಜ್ ಅವರನ್ನು ಮಣಿಸಿ, ಸೆಮಿಫೈನಲ್ಸ್ ಗೆ ಅರ್ಹತೆ ಪಡೆದರು. 

ಪಂಗಲ್ ಅವರು ಜಿದ್ದಾಜಿದ್ದಿನಿಂದ ಕೂಡಿದ್ದ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದರು. ಇವರು ಮಂಗೋಲಿಯಾದ ಖಾರ್ಖು ಎನ್ಖಮಂಡಖ್ ಆಟಗಾರನ ತಂತ್ರವನ್ನು ಮೆಟ್ಟಿನಿಂತು ಅಂಕಗಳನ್ನು ಕಲೆ ಹಾಕುವಲ್ಲಿ ಸಫಲರಾದರು. ಅಲ್ಲದೆ ಪಂದ್ಯವನ್ನು 3-2 ರಿಂದ ಗೆದ್ದು ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರು. ಮಂಗೋಲಿಯಾ ಆಟಗಾರ ನೀಡಿದ ಪಂಚ್ ಗಳಿಗೆ ಆರಂಭದಲ್ಲಿ ಉತ್ತರಿಸಲು ಹಿಂದೆ ಬಿದ್ದ, ಪಂಗಲ್ ನಂತರ ಸೊಗಸಾದ ಪ್ರತಿ ದಾಳಿ ನಡೆಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. 

ಟೋಕಿಯೊ ಒಲಿಂಪಿಕ್ಸ್ ಗಾಗಿ ಸ್ಥಾನ ಖಚಿತ ಪಡಿಸಿಕೊಂಡಿರುವ ವಿಕಾಸ್ ಕೃಷ್ಣ ಅವರು ತಮ್ಮ ರಕ್ಷಣಾತ್ಮಕ ಆಟ ಆಡಿ ಗಮನ ಸೆಳೆದರು. ವಿಕಾಸ್ 4-1 ರಿಂಧ ಇರಾನ್ ನ ಮೊಸ್ಲೆಮ್ ಮಲಾಮಿರ್ ಅವರನ್ನು ಮಣಿಸಿ ಮುನ್ನಡೆದರು. ಸೆಮೀಸ್ ಪಂದ್ಯದಲ್ಲಿ ವಿಕಾಸ್ ವಿಕಾಸ್ ಅಗ್ರ ಶ್ರೇಯಾಂಕಿತ ಮತ್ತು ಹಾಲಿ ಚಾಂಪಿಯನ್ ಉಜ್ಬೇಕಿಸ್ತಾನ್ನ ಬೊಬೊ-ಉಸ್ಮನ್ ಬಟುರೊವ್ ಅವರ ಸವಾಲು ಎದುರಿಸಲಿದ್ದಾರೆ. 

ಬುಧವಾರ ರಾತ್ರಿ ನಡೆದ ಏಷ್ಯನ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಇಬ್ಬರು ಬಾಕ್ಸರ್ ಗಳಾದ ನರೇಂದ್ರ(+91 ಕೆ.ಜಿ) ಮತ್ತು ಆಶಿಶ್ ಕುಮಾರ್(75 ಕೆಜಿ) ತಮ್ಮ ಕ್ವಾರ್ಟರ್ ಫೈನಲ್ಸ್ ಪಂದ್ಯಗಳಲ್ಲಿ ಸೋಲು ಅನುಭವಿಸಿದರು. 

ವಿಶ್ವ ಚಾಂಪಿಯನ್ಶಿಪ್ ಮತ್ತು ಏಷ್ಯನ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಅಬಿಲ್ಖಾನ್ ಅಮಾನಾಕುಲ್ ಅವರ ವಿರುದ್ಧ ಆಶಿಶ್ ನಿರಾಸೆ ಅನುಭವಿಸಿದರು. ಎರಡು ಬೆಳ್ಳಿ ಪದಕಗಳನ್ನು ಗೆದ್ದ ಕಮ್ಶಬೆಕ್ ಕುಂಕಬಾಯೆವ್ ವಿರುದ್ಧ ನರೇಂದ್ರ ಆಘಾತಕ್ಕೆ ಒಳಗಾದರು. 

Related Stories

No stories found.

Advertisement

X
Kannada Prabha
www.kannadaprabha.com