ಹಾಕಿ ಅಂಪೈರ್ ಸುರೇಶ್ ಕುಮಾರ್ ಠಾಕೂರ್ ಕೊರೋನಾ ಸಮಸ್ಯೆಯಿಂದ ಸಾವು

ಹಾಕಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್ ಆಗಿದ್ದ ಸುರೇಶ್ ಕುಮಾರ್ ಠಾಕೂರ್ (51) ಏ.24 ರಂದು ಕೊರೋನಾ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. 
ಹಾಕಿ (ಸಾಂಕೇತಿಕ ಚಿತ್ರ)
ಹಾಕಿ (ಸಾಂಕೇತಿಕ ಚಿತ್ರ)

ನವದೆಹಲಿ: ಹಾಕಿ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್ ಆಗಿದ್ದ ಸುರೇಶ್ ಕುಮಾರ್ ಠಾಕೂರ್ (51) ಏ.24 ರಂದು ಕೊರೋನಾ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. 

ಹಾಕಿ ಇಂಡಿಯಾ ಈ ಮಾಹಿತಿಯನ್ನು ದೃಢಪಡಿಸಿದೆ. ಮೊಹಾಲಿಯಲ್ಲಿ ಠಾಕೂರ್ ಮೃತಪಟ್ಟಿದ್ದಾರೆ. ಹ್ಯಾಂಬರ್ಗ್ (ಜರ್ಮನಿ)ಯಲ್ಲಿ ನಡೆದಿದ್ದ ನಾಲ್ಕು-ರಾಷ್ಟ್ರಗಳ ಟೂರ್ನಮೆಂಟ್, ಮಲೇಷ್ಯಾದಲ್ಲಿ ನಡೆದ ಅಜ್ಲನ್ ಶಾ ಹಾಕಿ ಟೂರ್ನಮೆಂಟ್ ನಲ್ಲಿ ಅಂಪೈರ್ ಆಗಿದ್ದರು. 

2013-14 ರಲ್ಲಿ ನಡೆದ ಹಾಕಿ ಇಂಡಿಯಾ ಲೀಗ್ ನಲ್ಲಿಯೂ ಠಾಕೂರ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುರೇಶ್ ಕುಮಾರ್ ಠಾಕೂರ್ ಪ್ರಸಿದ್ಧ ಅಂಪೈರ್ ಆಗಿದ್ದರು. ಅವರ ಸಾವು ತುಂಬಲಾರದ ನಷ್ಟ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೇಂದ್ರೊ ನಿಂಗೋಂಬಾಮ್ ಸಂತಾಪ ಸೂಚಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com