ಟೊಕಿಯೊ ಒಲಂಪಿಕ್ಸ್: ಮೊದಲ ಪ್ರಯತ್ನದಲ್ಲೇ ಫೈನಲ್ ಪ್ರವೇಶಿಸಿದ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ
ಟೋಕಿಯೊ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ (ಈಟಿ ಎಸೆತ) ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ ಫೈನಲ್‌ಗೆ ಪ್ರವೇಶ ಅರ್ಹತೆ ಪಡೆದುಕೊಂಡಿದ್ದಾರೆ.
Published: 04th August 2021 07:21 AM | Last Updated: 04th August 2021 07:21 AM | A+A A-

ನೀರಜ್ ಚೋಪ್ರಾ
ಟೊಕಿಯೊ: ಟೋಕಿಯೊ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ (ಈಟಿ ಎಸೆತ) ನಲ್ಲಿ ಸ್ಪರ್ಧಿಸುತ್ತಿರುವ ಭಾರತದ ಭರವಸೆಯ ಅಥ್ಲೀಟ್ ನೀರಜ್ ಚೋಪ್ರಾ ಫೈನಲ್‌ಗೆ ಪ್ರವೇಶ ಅರ್ಹತೆ ಪಡೆದುಕೊಂಡಿದ್ದಾರೆ.
ಮೊದಲ ಪ್ರಯತ್ನದಲ್ಲೇ ಚೋಪ್ರಾ 86.65 ಮೀಟರ್ ಸಾಧನೆಯೊಂದಿಗೆ ಫೈನಲ್ ಹಂತಕ್ಕೆ ನೇರ ಪ್ರವೇಶ ಪಡೆದುಕೊಂಡಿದ್ದಾರೆ. ಅಥ್ಲೆಟಿಕ್ಸ್ ವಿಭಾಗದ ಪುರುಷರ ಜಾವೆಲಿನ್ ಥ್ರೋನಲ್ಲಿ ಚೋಪ್ರಾ ಗ್ರೂಪ್ 'ಎ'ಯಲ್ಲಿದ್ದಾರೆ.
ಗ್ರೂಪ್ 'ಎ'ನಲ್ಲಿ ಸ್ಪರ್ಧಿಸುತ್ತಿರುವ ಚೋಪ್ರಾ ಪುರುಷರ ಲಾಂಗ್ ಥ್ರೋನ್ ಕ್ವಾಲಿಫಿಕೇಷನ್ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. 15ನೇ ಪೊಸಿಷನ್ನಲ್ಲಿ ಲಾಂಗ್ ಥ್ರೋನ್ ಮಾಡಿದ ಅವರು ಸುಮಾರು 86.65 ಮೀಟರ್ ಜಾವೆಲಿನ್ ಥ್ರೋ ಮಾಡುವ ಮೂಲಕ ನೇರವಾಗಿ ಫೈನಲ್‌ಗೆ ಲಗ್ಗೆ ಇಟ್ಟರು.
ಈ ಹಿಂದೆ, ಫಿನ್ಲ್ಯಾಂಡ್ನ ಲಸ್ಸಿ ಎಟೆಲಾಟಾಲೋ ಇದೇ ರೀತಿ ಮೊದಲ ಪ್ರಯತ್ನದಲ್ಲಿಯೇ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಜಾವೆಲಿನ್ ಥ್ರೋ ಫೈನಲ್ ಪಂದ್ಯ ಮೂರು ದಿನಗಳ ನಂತರ ಅಥವಾ ಆಗಸ್ಟ್ 7ರಂದು ನಡೆಯಲಿದೆ.
ಇದಕ್ಕೂ ಮೊದಲು ಮಂಗಳವಾರ ಭಾರತೀಯ ಮಹಿಳಾ ಜಾವೆಲಿನ್ ಥ್ರೋ ಸ್ಪರ್ಧಿ ಅನ್ನು ರಾಣಿ ಫೈನಲ್‌ಗೆ ಅರ್ಹತೆ ಪಡೆಯಲು ವಿಫಲರಾಗಿದ್ದರು. ಈಗ ನೀರಜ್ ಚೋಪ್ರಾ ಅರ್ಹತೆ ಪಡೆದಿದ್ದು, ಪದಕದ ಭರವಸೆ ಮೂಡಿಸಿದ್ದಾರೆ.