ಭಾರತಕ್ಕೆ ಮರಳಿದ ಟೋಕಿಯೋ ಒಲಿಂಪಿಕ್ಸ್ ಪದಕ ಸಾಧಕರಿಗೆ ಹೃದಯಸ್ಪರ್ಶಿ ಸ್ವಾಗತ

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕೀರ್ತಿ ತಂದ ಪದಕ ಸಾಧಕರಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದಿಂದ ಖಾಸಗಿ ಹೊಟೇಲ್ ಗೆ ಸಾಧಕರನ್ನು ಕರೆದುಕೊಂಡು ಹೋಗಲಾಯಿತು. ಅಲ್ಲಿ ಪದಕ ವಿಜೇತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನೀರಜ್ ಚೋಪ್ರಾ
ನೀರಜ್ ಚೋಪ್ರಾ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕೀರ್ತಿ ತಂದ ಪದಕ ಸಾಧಕರಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ವಿಮಾನ ನಿಲ್ದಾಣದಿಂದ ಖಾಸಗಿ ಹೊಟೇಲ್ ಗೆ ಸಾಧಕರನ್ನು ಕರೆದುಕೊಂಡು ಹೋಗಲಾಯಿತು. ಅಲ್ಲಿ ಪದಕ ವಿಜೇತರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ಭಾರತದ ಧ್ವಜವನ್ನು ಹಿಡಿದು ಆಟಗಾರರಿಗೆ ಜೈ ಕಾರ ಕೂಗಿದರು. ಅಲ್ಲದೆ ಪದಕ ವಿಜೇತರ ಫೋಟೋಗಳನ್ನು ಹೊಂದಿದ ಪೋಸ್ಟರ್ ಗಳು ನಗರದ ನಾನಾ ಕಡೆಗಳಲ್ಲಿ ಅಳವಡಿಸಲಾಗಿತ್ತು. ರಸ್ತೆಯುದ್ದಕ್ಕೂ ಡೋಲು, ವಾದ್ಯಗಳ ನಾದ ಮೊಳಗುತ್ತಿತ್ತು. ಡೆಲ್ಲಿ ಪೊಲೀಸ್ ಹಾಗೂ ಸಿಆರ್ ಪಿಎಫ್ ನ ಬಿಗಿ ಭದ್ರತೆ ಒದಗಿಸಿದ್ದರು.

ಟೋಕಿಯೋದಲ್ಲಿ ಸ್ವರ್ಣ ಸಾಧನೆ ಮಾಡಿದ ಜಾವಲಿನ್ ಥ್ರೋಪಟು ನೀರಜ್ ಛೋಪ್ರಾ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯಾ ಸ್ವಾಗತಿಸಿದರು.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಪದಕ ಬಾಚಿಕೊಂಡ ಭಾರತದ ಕ್ರೀಡಾ ಪಟುಗಳಿಗೆ ವಿಮಾನ ನಿಲ್ದಾಣದಲ್ಲಿ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು. ಸಾಧಕರ ಕೊರಳಿಗೆ ಮಾಲೆಯನ್ನು ಹಾಕಿ ಅವರ ಸಾಧನೆಯನ್ನು ಆರಂಭದಲ್ಲಿ ಸಂಭ್ರಮಿಸಲಾಯಿತು.

ಭಾರತದ ಭರವಸೆಯ ಕುಸ್ತಿ ಪಟು ಬೆಳ್ಳಿ ಪದಕ ವಿಜೇತ ರವಿಕುಮಾರ್ ದಹಿಯಾ ಹಾಗೂ ಕಂಚಿನ ಪಕದ ತಮ್ಮದಾಗಿಸಿಕೊಂಡಿರುವ ಬಜರಂಗ್ ಪೂನಿಯಾ ಅವರಿಗಾಗಿ ವಿಶೇಷ ಕಾರ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಓಪನ್ ಕಾರ್ ನಲ್ಲಿ ಕುಸ್ತಿ ಪಟುಗಳು ಅಭಿಮಾನಿಗಳತ್ತ ಕೈ ಬೀಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com