ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: 14 ಚಿನ್ನ ಸೇರಿ ಭಾರತಕ್ಕೆ 39 ಪದಕ

ಭಾರತದ ಬಾಕ್ಸರ್ ಪ್ರೀತಿ ದಹಿಯಾ ಸೇರಿದಂತೆ ಇತರ ಮೂವರು ಯುವತಿಯರು 2021 ಎಎಸ್‌ಬಿಸಿ ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಅಂತಿಮ ದಿನದಂದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಪ್ರೀತಿ ದಹಿಯಾ
ಪ್ರೀತಿ ದಹಿಯಾ
Updated on

ದುಬೈ: ಭಾರತದ ಬಾಕ್ಸರ್ ಪ್ರೀತಿ ದಹಿಯಾ ಸೇರಿದಂತೆ ಇತರ ಮೂವರು ಯುವತಿಯರು 2021 ಎಎಸ್‌ಬಿಸಿ ಏಷ್ಯನ್ ಯೂತ್ ಮತ್ತು ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಅಂತಿಮ ದಿನದಂದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 

ಇದರೊಂದಿಗೆ ದುಬೈನಲ್ಲಿ ನಡೆದ ಸ್ಪರ್ಧೆಯಲ್ಲಿ 14 ಚಿನ್ನ ಸೇರಿದಂತೆ ಭಾರತವು ಒಟ್ಟು 39 ಪದಕಗಳನ್ನು ಗೆದ್ದಿದೆ. ಭಾರತವು ಈ ಮೊದಲು ಆಡಿದ ಜೂನಿಯರ್ ಸ್ಪರ್ಧೆಯಲ್ಲಿ ಎಂಟು ಚಿನ್ನ, ಐದು ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಒಳಗೊಂಡಂತೆ ಒಟ್ಟು 19 ಪದಕಗಳನ್ನು ಗೆದ್ದಿತ್ತು. 

ಯುವ ಬಾಕ್ಸರ್‌ಗಳು ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾರತದ ಪರ 20 ಪದಕಗಳನ್ನು(ಆರು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಐದು ಕಂಚು) ಬಾಚಿಕೊಂಡಿದ್ದಾರೆ. ವಿಶೇಷವೆಂದರೆ ಮೊದಲ ಬಾರಿಗೆ, ಕಿರಿಯ ಮತ್ತು ಯುವ ವಯೋಮಾನದ ಪಂದ್ಯಗಳನ್ನು ಏಕಕಾಲದಲ್ಲಿ ಆಡಲಾಯಿತು.

54 ಕೆಜಿ ವಿಭಾಗದಲ್ಲಿ ನೇಹಾ ಯುವ ಮಹಿಳೆಯರ ವಿಭಾಗದಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದರು. ಇವರ ಪಂದ್ಯ ಸೋಮವಾರ ತಡರಾತ್ರಿ ಆಡಲಾಯಿತು. ಕಜಕಿಸ್ತಾನದ ಐಶಾಗುಲ್ ಏಳುಬಾಯೇವಾ ವಿರುದ್ಧ 3-2ರಿಂದ ಗೆಲ್ಲುವಲ್ಲಿ ಯಶಸ್ವಿಯಾದಳು.

ಪ್ರೀತಿ ದಹಿಯಾ ಭಾರತಕ್ಕೆ ಮತ್ತೊಂದು ಚಿನ್ನದ ಪದಕವನ್ನು ಸೇರಿಸಿದರು. 2021 ಯೂತ್ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಕಜಕಿಸ್ತಾನದ ಜುಲ್ಡಿಜ್ ಶೇಖ್‌ಮೆಟೋವಾ ವಿರುದ್ಧ 60 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ಜಯ ಸಾಧಿಸಿದರು. ಇದರ ನಂತರ ಸ್ನೇಹಾ ಕುಮಾರಿ (66 ಕೆಜಿ) ಮತ್ತು ಖುಷಿ (75 ಕೆಜಿ) ಕೂಡ ತಮ್ಮ ಫೈನಲ್‌ಗಳನ್ನು ಗೆಲ್ಲುವ ಮೂಲಕ ಚಿನ್ನದ ಪದಕಗಳನ್ನು ಗೆದ್ದರು

ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್‌ಐ) ಅಧ್ಯಕ್ಷ ಅಜಯ್ ಸಿಂಗ್, "ನಮ್ಮ ಕಿರಿಯ ಮತ್ತು ಯುವ ಬಾಕ್ಸರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. 39 ಪದಕಗಳನ್ನು ಗೆದ್ದಿರುವುದು ಶ್ಲಾಘನೀಯ. ಮತ್ತು ಇದು ಭಾರತದಲ್ಲಿ ನಾವು ಹೊಂದಿರುವ ಬಾಕ್ಸಿಂಗ್ ಪ್ರತಿಭೆಯ ಆಳವನ್ನು ತೋರಿಸುತ್ತದೆ. ದೇಶಾದ್ಯಂತದ ಹೆಚ್ಚು ಹೆಚ್ಚು ಯುವಕರನ್ನು ಗುರುತಿಸಲು ಮತ್ತು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com