ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ: ಪಾಕ್ ಮಣಿಸಿ ಕಂಚು ಗೆದ್ದ ಭಾರತ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಮೆಂಟ್‍ನಲ್ಲಿ ಬುಧವಾರ ನಡೆದ ಮೂರನೇ-ನಾಲ್ಕನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಭಾರತವು ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪುರುಷರ ಹಾಕಿ ಟೂರ್ನಮೆಂಟ್‍ನಲ್ಲಿ ಬುಧವಾರ ನಡೆದ ಮೂರನೇ-ನಾಲ್ಕನೇ ಸ್ಥಾನದ ಪ್ಲೇ-ಆಫ್ ಪಂದ್ಯದಲ್ಲಿ ಭಾರತವು ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗಳಿಸಿದೆ.

ಭಾರತವು 4-3 ರಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ.

ಮಸ್ಕತ್‍ನಲ್ಲಿ ನಡೆದ ಕಳೆದ ಆವೃತ್ತಿಯ ಟೂರ್ನಮೆಂಟ್‍ನಲ್ಲಿ ಪಾಕಿಸ್ತಾನದೊಂದಿಗೆ ಹಾಲಿ ಚಾಂಪಿಯನ್ ಆಗಿದ್ದ ಭಾರತ ಸೆಮಿಫೈನಲ್‍ನಲ್ಲಿ ಜಪಾನ್ ವಿರುದ್ಧ 3-5 ಗೋಲುಗಳಿಂದ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಭಾರತ ಮೊದಲ ನಿಮಿಷದಲ್ಲಿ ಉಪನಾಯಕ ಹರ್ಮನ್‍ಪ್ರೀತ್ ಸಿಂಗ್ ಮೂಲಕ ಮುನ್ನಡೆ ಸಾಧಿಸಿದ ನಂತರ ಸುಮಿತ್ (45ನೇ), ವರುಣ್ ಕುಮಾರ್ (53ನೇ) ಮತ್ತು ಆಕಾಶದೀಪ್ ಸಿಂಗ್ (57ನೇ) ತಲಾ ಒಂದು ಗೋಲು ಬಾರಿಸಿದರು.

ಪಾಕಿಸ್ತಾನವನ್ನು ಮುನ್ನಡೆಸಲು ಪ್ರಯತ್ನಿಸಿದ ಅಫ್ರಾಜ್ (10ನೇ), ಅಬ್ದುಲ್ ರಾಣಾ (33ನೇ) ಮತ್ತು ಅಹ್ಮದ್ ನದೀಮ್ (57ನೇ ನಿ) ಗೋಲು ಗಳಿಸಿದರೂ ಭಾರತವನ್ನು ಮಣಿಸಲು ಸಾಧ್ಯವಾಗಲಿಲ್ಲ.

ರೌಂಡ್-ರಾಬಿನ್ ಹಂತಗಳಲ್ಲಿ ಅದೇ ಎದುರಾಳಿಗಳನ್ನು 3-1 ರಿಂದ ಸೋಲಿಸಿದ ನಂತರ ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧದ ಎರಡನೇ ಜಯ ಗಳಿಸಿಕೊಂಡಿದೆ. ಬುಧವಾರ ತಡರಾತ್ರಿ ನಡೆಯಲಿರುವ ಶೃಂಗಸಭೆಯಲ್ಲಿ ದಕ್ಷಿಣ ಕೊರಿಯಾ ಜಪಾನ್ ವಿರುದ್ಧ ಆಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com