ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್: ಚಿನ್ನ ಗೆದ್ದ ಸಂಜೀತ್, ಶಿವ ಥಾಪ; ಅಮಿತ್ ಗೆ ಬೆಳ್ಳಿ!

ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬಾಕ್ಸರ್ ಸಂಜೀತ್ ಕಜಕಿಸ್ತಾನದ ವ್ಯಾಸಿಲಿ ಲೆವಿತ್ ವಿರುದ್ಧ ಗೆದ್ದು ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. 
ಬಾಕ್ಸರ್ ಸಂಜೀತ್
ಬಾಕ್ಸರ್ ಸಂಜೀತ್

ದುಬೈ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಬಾಕ್ಸರ್ ಸಂಜೀತ್ ಕಜಕಿಸ್ತಾನದ ವ್ಯಾಸಿಲಿ ಲೆವಿತ್ ವಿರುದ್ಧ ಗೆದ್ದು ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. 

91 ಕೆಜಿ ವಿಭಾಗದಲ್ಲಿ ಫೈನಲ್ ಪಂದ್ಯದಲ್ಲಿ ಸಂಜೀತ್ 3-2 ಅಂತರದಲ್ಲಿ ವ್ಯಾಸಿಲಿ ಲೆವಿತ್ ರನ್ನು ಸೋಲಿಸಿದ್ದಾರೆ. 

ಇನ್ನು 64 ಕೆಜಿ ವಿಭಾಗದಲ್ಲಿ ಭಾರತದ ಶಿವ ಥಾಪ ಮಂಗೋಲಿಯಾದ ಚಿನ್ಜೋರಿಗ್ ಬತಾರ್ಸುಖ್ ವಿರುದ್ಧದ 2-3 ಅಂತರದಿಂದ ಸೋಲು ಕಂಡಿದ್ದು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. 

52 ಕೆಜಿ ಸ್ಪರ್ಧೆಯ ಫೈನಲ್‌ನಲ್ಲಿ ಅಮಿತ್ ಪಂಗಲ್  ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ಉಜ್ಬೇಕಿಸ್ತಾನ್‌ನ ಶಖೋಬಿಡಿನ್ ಜೊಯಿರೊವ್ ವಿರುದ್ಧ 2-3 ತೀರ್ಪಿನ ನಂತರ ಸೋಲುಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com