ಪ್ಯಾರಾಲಿಂಪಿಕ್ ಕೊನೆಯ ದಿನ ಮುಂದುವರಿದ ಭಾರತದ ಪದಕ ಬೇಟೆ: ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಕೃಷ್ಣ ನಗರ್ ಗೆ ಚಿನ್ನ

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಕೃಷ್ಣ ನಗರ್ ಅವರು ಹಾಂಕಾಂಗ್ ನ ಚು ಮನ್ ಕೈ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ನಗರ್
ಬ್ಯಾಡ್ಮಿಂಟನ್ ಆಟಗಾರ ಕೃಷ್ಣ ನಗರ್
Updated on

ಟೋಕಿಯೊ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಕೃಷ್ಣ ನಗರ್ ಅವರು ಹಾಂಕಾಂಗ್ ನ ಚು ಮನ್ ಕೈ ಅವರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ರಾಜಸ್ತಾನ ಮೂಲದ ಕೃಷ್ಣ ಅವರು ಪದಕ ಗೆಲ್ಲುತ್ತಿದ್ದಂತೆ ಹರ್ಷ ವ್ಯಕ್ತಪಡಿಸುತ್ತಿದ್ದಂತೆ ಅವರ ತಂದೆ ಸುನಿಲ್ ನಗರ್ ಪ್ರತಿಕ್ರಿಯಿಸಿ, ಇಂದು ನಮ್ಮ ಸಂತೋಷಕ್ಕೆ ಪಾರವೇ ಇಲ್ಲದಾಗಿದೆ. ಇಡೀ ದೇಶ ಅವರ ಸಾಧನೆಗೆ ಹೆಮ್ಮೆಪಡುತ್ತಿದೆ ಎಂದಿದ್ದಾರೆ.

ಇನ್ನು ರಾಷ್ಟ್ರಪತಿ, ಪ್ರಧಾನಿ ಮೋದಿ, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಸೇರಿದಂತೆ ಹಲವು ಗಣ್ಯರು ಕೃಷ್ಣ ನಗರ್ ಗೆ ಶುಭ ಕೋರಿದ್ದಾರೆ. 

ಹಾಂಕಾಂಗ್ ದೇಶದ ಚು ಮನ್ ಕೈ ಅವರನ್ನು 21-17, 16-21, 21-17 ಸೆಟ್ ಗಳಿಂದ ಕೃಷ್ಣ ನಗರ್ ಸೋಲಿಸಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ ನಲ್ಲಿ ಭಾರತಕ್ಕೆ 5 ಚಿನ್ನದ ಪದಕ, 8 ಬೆಳ್ಳಿ ಮತ್ತು 6 ಕಂಚಿನ ಪದಕಗಳೊಂದಿಗೆ ಇದುವರೆಗೆ ಒಟ್ಟು 19 ಪದಕಗಳನ್ನು ಗೆದ್ದುಕೊಂಡು ಭಾರತ 24ನೇ ಸ್ಥಾನದಲ್ಲಿದೆ. 206 ಪದಕಗಳೊಂದಿಗೆ ಚೀನಾ ಮೊದಲ ಸ್ಥಾನದಲ್ಲಿ ಮತ್ತು 124 ಪದಕಗಳನ್ನು ಗಳಿಸುವ ಮೂಲಕ ಗ್ರೇಟ್ ಬ್ರಿಟನ್ ಎರಡನೇ ಸ್ಥಾನದಲ್ಲಿದೆ.

ಇಂದು ಮುಕ್ತಾಯ: ಪ್ಯಾರಾಲಿಂಪಿಕ್ಸ್ 2021 ಆಗಸ್ಟ್ 24ರಂದು ಆರಂಭವಾಗಿದ್ದು ಇಂದು ಮುಕ್ತಾಯವಾಗಲಿದೆ. ಈ ಬಾರಿ 162 ದೇಶಗಳ 4 ಸಾವಿರದ 403 ಸ್ಪರ್ಧಿಗಳು ಭಾಗವಹಿಸಿದ್ದು ಒಟ್ಟು 22 ಕ್ರೀಡೆಗಳಲ್ಲಿ 539 ಪಂದ್ಯಗಳು ಜರುಗಿವೆ. ಭಾರತದಿಂದ 9 ಕ್ರೀಡೆಗಳಲ್ಲಿ 54 ಕ್ರೀಡಾಪಟುಗಳು ಸ್ಪರ್ಧಿಸಿದ್ದಾರೆ.

ಟೆಕ್ ಚಂದ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಧ್ವಜವನ್ನು ಹೊತ್ತು ಮುನ್ನಡೆಸಿದ್ದರೆ ಸ್ಥಳೀಯ ಕಾಲಮಾನ ನಾಳೆ ಸಾಯಂಕಾಲ 4.30ಕ್ಕೆ ನಡೆಯಲಿರುವ ಮುಕ್ತಾಯ ಸಮಾರಂಭದಲ್ಲಿ ಶೂಟರ್ 19 ವರ್ಷದ ಆವನಿ ಲೆಖರಾ ಭಾರತದ ಧ್ವಜವನ್ನು ಹೊತ್ತು ಮುನ್ನಡೆಸಲಿದ್ದಾರೆ.

ಇದನ್ನೂ ಓದಿ: ಟೋಕಿಯೊ ಪ್ಯಾರಾಲಿಂಪಿಕ್ಸ್: 11 ಆವೃತ್ತಿಗಳಲ್ಲಿ ಭಾರತ ಇದೇ ಮೊದಲ ಬಾರಿಗೆ ಕ್ರೀಡಾಕೂಟವೊಂದರಲ್ಲಿ 12 ಪದಕ ಗೆದ್ದು ದಾಖಲೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com