FIFA vs AIFF: 'ಅಮಾನತು ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಿ'; ಕೇಂದ್ರಕ್ಕೆ 'ಸುಪ್ರೀಂ' ಸೂಚನೆ, ಆಗಸ್ಟ್ 22ಕ್ಕೆ ವಿಚಾರಣೆ ಮುಂದೂಡಿಕೆ

ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ ಅನ್ನು ಅಮಾನುತ ಮಾಡಿರುವ ಅಂತಾರಾಷ್ಟ್ರೀಯ ಫುಟ್‌ಬಾಲ್ ಆಡಳಿತ ಮಂಡಳಿ ಫೀಫಾ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಮಾನತು ತೆರವಿಗೆ ಅಗತ್ಯಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 22ಕ್ಕೆ  ಮುಂದೂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ ಅನ್ನು ಅಮಾನುತ ಮಾಡಿರುವ ಅಂತಾರಾಷ್ಟ್ರೀಯ ಫುಟ್‌ಬಾಲ್ ಆಡಳಿತ ಮಂಡಳಿ ಫೀಫಾ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅಮಾನತು ತೆರವಿಗೆ ಅಗತ್ಯಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 22ಕ್ಕೆ ಮುಂದೂಡಿದೆ.

ಈ ಕುರಿತು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಮನವಿಯ ಆಧಾರದ ಮೇಲೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್‌ನ ಅಂತರರಾಷ್ಟ್ರೀಯ ಫುಟ್‌ಬಾಲ್ ಆಡಳಿತ ಮಂಡಳಿ ಫಿಫಾ ಅಮಾನತುಗೊಳಿಸುವುದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್, ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಮೇಲೆ ಅಂತರರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ವಿಧಿಸಿರುವ ಅಮಾನತು ತೆರವಿಗೆ ಬೇಕಾದ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.

ಎಐಎಫ್‌ಎಫ್‌ಗೆ ಸಂಬಂಧಪಟ್ಟ ಪ್ರಕರಣದ ವಿಚಾರಣೆಯನ್ನು ಬುಧವಾರ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಕೋರಿಕೆಯ ಮೇರೆಗೆ, ಮಹಿಳಾ ಅಂಡರ್-17 ವಿಶ್ವಕಪ್ ಆಯೋಜಿಸಲು ಹಾಗೂ ಫಿಫಾ ಹೇರಿರುವ ಅಮಾನತು ತೆರವುಗೊಳಿಸಲು ಸಕ್ರಿಯ ಪಾತ್ರ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಬುಧವಾರ ಆಗಸ್ಟ್ 22 ಕ್ಕೆ ಮುಂದೂಡಿದೆ.

ಸರ್ಕಾರದ ವಾದವೇನು?
17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್‌ ವಿಶ್ವಕಪ್ ಆಯೋಜನೆಯಿಂದ ಭಾರತೀಯ ಫುಟ್ಬಾಲ್‌ಗೆ ಪ್ರಯೋಜನವಾಗಲಿದೆ ಎಂದು ಸುಪ್ರಿಂ ಕೋರ್ಟ್ ಉಲ್ಲೇಖಿಸಿದೆ. ವಿವಾದ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಚರ್ಚೆ ಪ್ರಗತಿಯಲ್ಲಿದೆ. ಅಲ್ಲದೆ ಪ್ರಕರಣ ಆಗಸ್ಟ್ 22ರ ವರೆಗೆ ಮುಂದೂಡಲು ಕೇಂದ್ರ ಸರ್ಕಾರ ವಿನಂತಿಸಿದೆ. ಈ ವೇಳೆ ಕೇಂದ್ರ ಸರ್ಕಾರದ ಪರವಾದ ಮಂಡಿಸಿದ ಸಾಲಿಸಿಟರ್ ಮೆಹ್ತಾ ಅವರು, 'ಏನು ಮಾಡಬಹುದು ಎಂಬುದರ ಕುರಿತು ಹಲವಾರು ಅಂಶಗಳನ್ನು ಪರಿಗಣಿಸಿ, ಕೇಂದ್ರವು ಮಂಗಳವಾರ ಫಿಫಾದೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಂಡಿದೆ ಮತ್ತು ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಸಹ ಪ್ರಮುಖ ಪಾತ್ರ ವಹಿಸಿದೆ ಮತ್ತು ಸ್ವಲ್ಪಮಟ್ಟಿಗೆ ಐಸ್ ಬ್ರೇಕ್ ಇದೆ. ಫಿಫಾದೊಂದಿಗೆ ಮಂಗಳವಾರ ಎರಡು ಸಭೆಗಳನ್ನು ನಡೆಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. 

ಆಡಳಿತದಲ್ಲಿ ಅನ್ಯರ ಅತಿಯಾದ ಹಸ್ತಕ್ಷೇ‍ಪದ ಕಾರಣ ಎಐಎಫ್‌ಎಫ್‌ ಅನ್ನು ಫಿಫಾ ಮಂಗಳವಾರ ಅಮಾನತುಗೊಳಿಸಿತ್ತು.

ಏನಿದು ಪ್ರಕರಣ? 
ಎಐಎಫ್‌ಎಫ್‌ನ ದೈನಂದಿನ ವ್ಯವಹಾರಗಳನ್ನು ನಿರ್ವಹಿಸಲು ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಅನ್ನು ಉಲ್ಲೇಖಿಸಿ "ಮೂರನೇ ವ್ಯಕ್ತಿಯಿಂದ ಅನಗತ್ಯ ಹಸ್ತಕ್ಷೇಪ" ಎಂದು ಫಿಫಾ ಉಲ್ಲೇಖಿಸಿತ್ತು, ಇದು ಭಾರತವನ್ನು ಅಮಾನತುಗೊಳಿಸಲು ಕಾರಣವಾಗಿದೆ. ಅಮಾನತು ಎಂದರೆ ಯಾವುದೇ ಭಾರತೀಯ ತಂಡ, ಕ್ಲಬ್ ಅಥವಾ ದೇಶವು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವಂತಿಲ್ಲ. "ಫಿಫಾ ಕೌನ್ಸಿಲ್‌ನ ಬ್ಯೂರೋ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಅನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲು ಸರ್ವಾನುಮತದಿಂದ ನಿರ್ಧರಿಸಿದೆ, ಇದು ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವದಿಂದಾಗಿ, ಇದು ಫಿಫಾ ಕಾನೂನುಗಳ ಗಂಭೀರ ಉಲ್ಲಂಘನೆಯಾಗಿದೆ" ಎಂದು ಫಿಫಾ ಹೇಳಿಕೆಯಲ್ಲಿ ತಿಳಿಸಿದೆ.

85 ವರ್ಷಗಳ ಅಸ್ತಿತ್ವದಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅನ್ನು FIFA ನಿಷೇಧಿಸಿರುವುದು ಇದೇ ಮೊದಲು, ನಿರ್ಣಾಯಕವಾಗಿ, ಅಕ್ಟೋಬರ್ 11, 2022 ರಂದು ಪ್ರಾರಂಭವಾಗಲಿರುವ FIFA U-17 ಮಹಿಳಾ ವಿಶ್ವಕಪ್‌ನ ಆತಿಥ್ಯ ಹಕ್ಕುಗಳನ್ನು ಭಾರತ ಕಳೆದುಕೊಳ್ಳುತ್ತದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com