7 ವರ್ಷಗಳ ಹಿಂದೆಯೇ ಮೆಸ್ಸಿ ವಿಶ್ವಕಪ್ ಗೆಲುವು ಭವಿಷ್ಯ ನುಡಿದಿದ್ದ ಟ್ವಿಟರ್ ಖಾತೆದಾರ, ಹಳೆಯ ಟ್ವೀಟ್ ವೈರಲ್

ನಿನ್ನೆ ಕತಾರ್ ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೆಂಟಿನಾ ತಂಡ ಜಯಭೇರಿ ಭಾರಿಸಿದ್ದು, ಈ ಮೂಲಕ ಸತತ 36 ವರ್ಷಗಳ ಬಳಿಕ ಅರ್ಜೆಂಟಿನಾ ತಂಡ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ.
ವಿಶ್ವಕಪ್ ಪ್ರಶಸ್ತಿ ಜೊತೆ ಮೆಸ್ಸಿ
ವಿಶ್ವಕಪ್ ಪ್ರಶಸ್ತಿ ಜೊತೆ ಮೆಸ್ಸಿ

ದೋಹಾ: ನಿನ್ನೆ ಕತಾರ್ ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೆಂಟಿನಾ ತಂಡ ಜಯಭೇರಿ ಭಾರಿಸಿದ್ದು, ಈ ಮೂಲಕ ಸತತ 36 ವರ್ಷಗಳ ಬಳಿಕ ಅರ್ಜೆಂಟಿನಾ ತಂಡ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ.

ಈ ವಿಶ್ವಕಪ್ ಪ್ರಶಸ್ತಿಯೊಂದಿಗೆ ವಿಶ್ವದ ಜನಪ್ರಿಯ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ತಮ್ಮ ವೃತ್ತಿ ಜೀವನದ ಅಂತಿಮ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಭಾನುವಾರ ಕತಾರ್ ನ ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. 

36 ವರ್ಷಗಳ ಬಳಿಕ ಅರ್ಜೆಂಟೀನಾ ಫಿಫಾ ವಿಶ್ವಕಪ್ ಗೆದ್ದಿದೆ. 35 ವರ್ಷದ ಲಿಯೋನೆಲ್ ಮೆಸ್ಸಿ ತಮ್ಮ ಕೊನೆಯ ವಿಶ್ವಕಪ್‌ ಟೂರ್ನಿಯಲ್ಲಿ ಕೊನೆಗೂ ಕಪ್ ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಫೈನಲ್‌ ಪಂದ್ಯದಲ್ಲಿ ಮೆಸ್ಸಿ ಎರಡು ಅದ್ಭುತ ಗೋಲುಗಳನ್ನು ದಾಖಲಿಸಿದರು. ಪೆನಾಲ್ಟಿ ಶೂಟೌಟ್‌ನಲ್ಲಿ ಕೂಡ ಗೋಲು ಗಳಿಸಿದರು. 

7 ವರ್ಷಗಳ ಹಿಂದೆಯೇ ಮೆಸ್ಸಿ ವಿಶ್ವಕಪ್ ಗೆಲುವು ಭವಿಷ್ಯ ನುಡಿದಿದ್ದ ಟ್ವಿಟರ್ ಖಾತೆದಾರ
ಅಚ್ಚರಿಯಾದರೂ ಸತ್ಯ.. ಫೈನಲ್ ಪಂದ್ಯದ ಆರಂಭಕ್ಕೂ ಮುನ್ನವೇ 7 ವರ್ಷಗಳ ಹಳೆಯ ಟ್ವೀಟ್ ವೈರಲ್ ಆಗಿತ್ತು. ಅರ್ಜೆಂಟೀನಾ ವಿಶ್ವಕಪ್ ಗೆದ್ದ ನಂತರ ಆ ಟ್ವೀಟ್ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಯಾವುದೇ ವಿಶ್ವಕಪ್ ಆರಂಭಕ್ಕೆ ಮುನ್ನ ಅಭಿಮಾನಿಗಳು ತಮ್ಮ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂದು ನಂಬುವುದು, ಬೆಂಬಲ ನೀಡುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು ಸಾಮಾನ್ಯ. ಆದರೆ, 7 ವರ್ಷಗಳ ಹಿಂದೆಯೇ ಟ್ವಿಟರ್ ಬಳಕೆದಾರರೊಬ್ಬರು ದಿನಾಂಕ ಸಹಿತ 2022 ರ ಫಿಫಾ ವಿಶ್ವಕಪ್‌ ಬಗ್ಗೆ ಹೇಳಿದ್ದ ಭವಿಷ್ಯವೊಂದು ನಿಜವಾಗಿದೆ.

2015ರಲ್ಲೇ ಭವಿಷ್ಯ ನುಡಿದಿದ್ದ ಟ್ವಿಟರ್ ಬಳಕೆದಾರ ಜೋಸ್ ಮಿಗುಯೆಲ್ ಪೊಲಾಂಕೊ (@josepolanco10) ಎನ್ನುವ ಹೆಸರಿನ ಟ್ವಿಟರ್ ಬಳಕೆದಾರರೊಬ್ಬರು, ಮಾರ್ಚ್ 21, 2015ರಲ್ಲಿ ಅರ್ಜೆಂಟಿನಾ ವಿಶ್ವಕಪ್ ಗೆಲ್ಲುವ ಬಗ್ಗೆ ಭವಿಷ್ಯ ನುಡಿದಿದ್ದರು. "2022 ಡಿಸೆಂಬರ್ 18 ರಂದು ಲಿಯೋನೆಲ್ ಮೆಸ್ಸಿ ವಿಶ್ವಕಪ್ ಗೆಲ್ಲಲಿದ್ದಾರೆ. ಜಗತ್ತಿನ ಅತ್ಯಂತ ಶ್ರೇಷ್ಠ ಫುಟ್ಬಾಲ್ ಆಟಗಾರ ಎನಿಸಿಕೊಳ್ಳಲಿದ್ದಾರೆ. 7 ವರ್ಷಗಳ ಬಳಿಕ ನಾನು ಹೇಳಿದ್ದನ್ನು ನೆನಪು ಮಾಡಿಕೊಳ್ಳಿ" ಎಂದು ಟ್ವೀಟ್ ಮಾಡಿದ್ದಾರೆ. ಅರ್ಜೆಂಟಿನಾ ವಿಶ್ವಕಪ್ ಗೆಲ್ಲುತ್ತಿದ್ದಂತೆ ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com