ಕ್ರೀಡಾ ಗ್ರಾಮಕ್ಕೆ ಕೋಚ್ ಗೆ ಪ್ರವೇಶ ನಿರಾಕರಣೆ; ಕೋಚಿಂಗ್ ನಿರಾಕರಿಸಿ ಕಿರುಕುಳ: ಒಲಿಂಪಿಕ್ಸ್ ಪದಕ ವಿಜೇತೆ ಲೊವ್ಲಿನಾ ಆರೋಪ

ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಅವರು ಭಾರತ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ತನಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಲೊವ್ಲಿನಾ ಬೊರ್ಗೊಹೈನ್
ಲೊವ್ಲಿನಾ ಬೊರ್ಗೊಹೈನ್
Updated on

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಅವರು ಭಾರತ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ತನಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಅಸ್ಸಾಮಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಲೊವ್ಲಿನಾ ಬೊರ್ಗೊಹೈನ್, ಪ್ರಸ್ತುತ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿದ್ದಾರೆ. ಆದರೆ ತಮ್ಮ ವಿಚಾರಕ್ಕೆ ಸಂಬಂಧಿಸಿದಂತೆ ಕಿರುಕುಳ ನೀಡಲಾಗುತ್ತಿದೆ ಎಂದು ಬಾಕ್ಸರ್ ಗಂಭೀರ ಆರೋಪ ಮಾಡಿದ್ದಾರೆ.  ಲೊವ್ಲಿನಾ ಟ್ವಿಟರ್‌ನಲ್ಲಿ ಬಿಎಫ್‌ಐ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದು, 'ಭಾರತ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ತನ್ನೊಂದಿಗೆ ಕೊಳಕು ರಾಜಕೀಯವನ್ನಾಡುತ್ತಿದೆ ಎಂದು ಆರೋಪಿಸಿದ್ದಾರೆ.

"ಇಂದು ಅತ್ಯಂತ ದುಃಖದಿಂದ ನನ್ನ ಮೇಲೆ ಕಿರುಕುಳ ನಡೆಯುತ್ತಿದೆ ಎಂದು ಬಹಿರಂಗಪಡಿಸಲು ಬಯಸುತ್ತೇನೆ. ಒಲಿಂಪಿಕ್ ಪದಕ ಗೆಲ್ಲಲು ನನಗೆ ಸಹಾಯ ಮಾಡಿದ ತರಬೇತುದಾರರನ್ನು ತೆಗೆದುಹಾಕಲಾಗಿದೆ, ಇದು ನನ್ನ ತರಬೇತಿ ಪ್ರಕ್ರಿಯೆಗೆ ಅಡ್ಡಿಯಾಗಿದೆ. ತರಬೇತುದಾರರಲ್ಲಿ ಒಬ್ಬರು ಸಂಧ್ಯಾ ಗುರುಂಗ್ಜಿ, ಅವರು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ನನ್ನ ತರಬೇತುದಾರರು ತರಬೇತಿ ಶಿಬಿರದಲ್ಲಿ ಸೇರಿಸಿಕೊಳ್ಳಲು ಮನವಿ ಮಾಡಿದೆ ಮತ್ತು ಅವರನ್ನು ತಡವಾಗಿ ಸೇರಿಸಲಾಗಿದೆ," ಎಂದು ಲೊವ್ಲಿನಾ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

"ಈ ತರಬೇತಿ ಶಿಬಿರಗಳಲ್ಲಿ ನಾನು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಮತ್ತು ಇದು ಮಾನಸಿಕ ಕಿರುಕುಳವನ್ನು ಉಂಟುಮಾಡುತ್ತದೆ. ಇದೀಗ ನನ್ನ ತರಬೇತುದಾರ ಸಂಧ್ಯಾ ಗುರುಂಗ್ಜಿ ಕಾಮನ್‌ವೆಲ್ತ್ ವಿಲೇಜ್‌ನ ಹೊರಗಿದ್ದಾರೆ ಮತ್ತು ಅವರು ಪ್ರವೇಶ ಪಡೆಯುತ್ತಿಲ್ಲ. ಕ್ರೀಡಾಕೂಟಕ್ಕೆ ಎಂಟು ದಿನಗಳ ಮುಂಚಿತವಾಗಿ ನನ್ನ ತರಬೇತಿ ಪ್ರಕ್ರಿಯೆಯನ್ನು ನಿಲ್ಲಿಸಲಾಯಿತು. ನನ್ನ ಎರಡನೇ ತರಬೇತುದಾರನನ್ನು ಭಾರತಕ್ಕೆ ವಾಪಸ್ ಕಳುಹಿಸಲಾಗಿದೆ. ಇಷ್ಟೆಲ್ಲಾ ಮನವಿ ಮಾಡಿದರೂ ನಾನು ಮಾನಸಿಕ ಕಿರುಕುಳವನ್ನು ಎದುರಿಸಬೇಕಾಯಿತು. ಈ ಕಾರಣದಿಂದಾಗಿ ನನ್ನ ಕೊನೆಯ ವಿಶ್ವ ಚಾಂಪಿಯನ್‌ಶಿಪ್‌ಗಳು ಹಾಳಾಗಿದ್ದರಿಂದ ನಾನು ಕಾಮನ್‌ವೆಲ್ತ್ ಗೇಮ್ಸ್‌ನತ್ತ ಹೇಗೆ ಗಮನಹರಿಸಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ".

ಆದರೆ ನಾನು ಭಾರತ ಬಾಕ್ಸಿಂಗ್ ಫೆಡರೇಶನ್ (ಬಿಎಫ್‌ಐ) ಮಡುತ್ತಿರುವ ಈ ರಾಜಕೀಯದ ಕಾರಣದಿಂದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನನ್ನ ಆಟವನ್ನು ಹಾಳು ಮಾಡಲು ಬಯಸುವುದಿಲ್ಲ. ನನ್ನ ದೇಶಕ್ಕಾಗಿ ನಾನು ಈ ರಾಜಕೀಯ ಕಿರುಕುಳ ಮುರಿದು ಪದಕವನ್ನು ತರಬಲ್ಲೆ ಎಂದು ನಾನು ಭಾವಿಸುತ್ತೇನೆ,'' ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ತಿಳಿಸಿದ್ದಾರೆ.

ಇದಕ್ಕೆ ಕೂಡಲೇ ಸ್ಪಂದಿಸಿರುವ ಕ್ರೀಡಾ ಸಚಿವಾಲಯವು ಪರಿಸ್ಥಿತಿಯನ್ನು ಗಮನಿಸಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಲೊವ್ಲಿನಾ ಅವರ ಕೋಚ್‌ಗೆ ಮಾನ್ಯತೆ ನೀಡಲು ತಕ್ಷಣವೇ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದೆ. ತರಬೇತುದಾರರಲ್ಲಿ ಒಬ್ಬರು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಸಂಧ್ಯಾ ಗುರುಂಗ್ಜಿ ಎಂದು ಹೇಳಲಾಗಿದೆ.

ಭಾರತೀಯ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ 2018ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು 2019ರ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ ಕಂಚಿನ ಪದಕಗಳನ್ನ ಗೆದ್ದಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಸಾಕಷ್ಟು ಭಾರತದ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ. ಬಾಕ್ಸರ್ ವಿಜೇಂದರ್ ಕುಮಾರ್ (2008) ಮತ್ತು ಎಂ.ಸಿ.ಮೇರಿ ಕೋಮ್ (2012) ನಂತರ ಬಾಕ್ಸಿಂಗ್‌ನಲ್ಲಿ ಒಲಿಂಪಿಕ್ಸ್ ಪದಕ ಗೆದ್ದ 3ನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಗೆಯನ್ನೂ ಹೊಂದಿದ್ದಾರೆ. ಟೋಕಿಯೊ 2020 ರಲ್ಲಿ ಮಹಿಳೆಯರ 69 ಕೆಜಿ ಕಂಚಿನ ಪದಕವನ್ನು ಗೆದ್ದಾಗ ಲೊವ್ಲಿನಾ ಇತಿಹಾಸ ಸೃಷ್ಠಿಸಿದ್ದರು. ವಿಜೇಂದರ್ ಸಿಂಗ್(ಬೀಜಿಂಗ್ 2008 ರಲ್ಲಿ ಕಂಚು) ಮತ್ತು ಮೇರಿ ಕೋಮ್(ಲಂಡನ್ 2012 ರಲ್ಲಿ ಕಂಚು) ನಂತರ ಒಲಿಂಪಿಕ್ಸ್‌ ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಬಾಕ್ಸರ್ ಎನಿಸಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com