ಇಂಡೋನೇಷ್ಯಾ: ಪುಟ್ಬಾಲ್ ಪಂದ್ಯದ ವೇಳೆ ಹಿಂಸಾಚಾರ, 127 ಮಂದಿ ದುರ್ಮರಣ

ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ಪಿಚ್ ಮೇಲೆ ದಾಳಿ ನಡೆಸಿದಾಗ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಕಾಲ್ತುಳಿತ ಸಂಭವಿಸಿದ ಮೈದಾನ
ಕಾಲ್ತುಳಿತ ಸಂಭವಿಸಿದ ಮೈದಾನ
Updated on

ಮಲಾಂಗ್: ಇಂಡೋನೇಷ್ಯಾದ ಫುಟ್ಬಾಲ್ ಸ್ಟೇಡಿಯಂನಲ್ಲಿ ಅಭಿಮಾನಿಗಳು ಪಿಚ್ ಮೇಲೆ ದಾಳಿ ನಡೆಸಿದಾಗ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ  ಪೂರ್ವ ಮಲಾಂಗ್ ನ ಕಂಜುರುಹಾನ್ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ. ಸುರಬಯಾ ವಿರುದ್ಧ 3-2 ಅಂತರದಿಂದ ಅರೆಮಾ ಎಫ್‌ಸಿ  ಪರ್ಸೆಬಯಾ ತಂಡ ಸೋತ ನಂತರ ಆ ತಂಡದ ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಪ್ರಯತ್ನಿಸಿದ್ದು, ಇಬ್ಬರು ಅಧಿಕಾರಿಗಳು ಹತ್ಯೆಯಾದ ನಂತರ ಆಶ್ರುವಾಯು ಸಿಡಿಸಿದ್ದಾರೆ. ಕಾಲ್ತುಳಿತದಲ್ಲಿ ಅನೇಕ ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

ಈ ಹಿಂಸಾಚಾರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 127 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ 34 ಜನರು ಕ್ರೀಡಾಂಗಣದೊಳಗೆ ಮೃತಪಟ್ಟರೆ, ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೂರ್ವ ಜಾವಾ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.  

ಒಂದು ಪ್ರವೇಶ ದ್ವಾರದಲ್ಲಿ ಗುಂಪಾಗಿ ಜನರು ಓಡಿದಾಗ ಅನೇಕ ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಭಾರೀ ಪ್ರಮಾಣದ ಆಶ್ರುವಾಯು ಹಾಗೂ ಜನರು ಬೇಲಿಗಳನ್ನು ಹತ್ತುತ್ತಿರುವುದನ್ನು ಕ್ರೀಡಾಂಗಣದ  ಒಳಗಿನಿಂದ ಸೆರೆಹಿಡಿಯಲಾದ ಚಿತ್ರಗಳು ತೋರಿಸಿವೆ.

ಸ್ಟೇಡಿಯಂ ಹೊರಗಡೆಯಲ್ಲಿ ಬೆಂಕಿ ಹಚ್ಚಿ ಸುಡಲಾಗಿದ್ದ ವಾಹನಗಳಲ್ಲಿ ಗಾಯಾಗಳುಗಳನ್ನು ಜನರು ಆಸ್ಪತ್ರೆ ಕರೆದೊಯ್ದರು.  ಇಂಡೋನೇಷ್ಯಾ ಸರ್ಕಾರವು ಘಟನೆಗೆ ಕ್ಷಮೆಯಾಚಿಸಿದ್ದು, ಈ ಕುರಿತು ತನಿಖೆ ಮಾಡುವುದಾಗಿ ಭರವಸೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com