ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್: ಬೆಳ್ಳಿ ಗೆದ್ದ ರಿಲೇ ತಂಡ, ರಾಜ್ಯದ ಪ್ರಿಯಾ ಮೋಹನ್ ಗೆ 5 ಲಕ್ಷ ನಗದು ಪುರಸ್ಕಾರ
ಕೊಲಂಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್ ನಲ್ಲಿ ಬೆಳ್ಳಿ ಗೆದ್ದ ಕರ್ನಾಟಕದ ಪ್ರಿಯಾ ಮೋಹನ್ ಒಳಗೊಂಡ ಭಾರತೀಯ ರಿಲೇ ತಂಡಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.
Published: 03rd August 2022 05:48 PM | Last Updated: 03rd August 2022 05:50 PM | A+A A-

ಪ್ರಿಯಾ ಮೋಹನ್
ಬೆಂಗಳೂರು: ಕೊಲಂಬಿಯಾದಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್ ನಲ್ಲಿ ಬೆಳ್ಳಿ ಗೆದ್ದ ಕರ್ನಾಟಕದ ಪ್ರಿಯಾ ಮೋಹನ್ ಒಳಗೊಂಡ ಭಾರತೀಯ ರಿಲೇ ತಂಡಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣ ಗೌಡ ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕದ ಪ್ರಿಯಾ ಮೋಹನ್ , ಭರತ್, ಶ್ರೀಧರ್, ರೂಪಾಲ್ ಚೌಧರಿ ಮತ್ತು ಕಪಿಲ್ ಅವರನ್ನೊಳಗೊಂಡ ಮಿಶ್ರ ರಿಲೇ ತಂಡ ಉತ್ತಮ ಪ್ರದರ್ಶನ ತೋರಿಸಿದ್ದು, ಕೂದಲೆಳೆ ಅಂತರದಲ್ಲಿ ಚಿನ್ನದ ಪದಕ ಕೈ ತಪ್ಪಿದೆ. ಕಳೆದ ವರ್ಷ ಕಂಚಿನ ಪದಕದ ಸಾಧನೆ ಮಾಡಿದ್ದ ಭಾರತದ ರಿಲೇ ತಂಡ ಈ ಬಾರಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದೆ. ಸ್ವಲ್ಪದರಲ್ಲಿ ಚಿನ್ನದ ಪದಕ ಕೈ ತಪ್ಪಿದ್ದು, ಮುಂದಿನ ಸಲ ಚಿನ್ನದ ಪದಕ ಗೆಲ್ಲುವ ವಿಶ್ವಾಸವಿದ್ದು, ಅತ್ಯುತ್ತಮ ಸಾಧನೆ ಮಾಡಿರುವ ರಿಲೇ ತಂಡಕ್ಕೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಪ್ರಿಯಾ ಮೋಹನ್ ಅವರಿಗೆ 5 ಲಕ್ಷ ರೂ. ನಗದು ಪುರಸ್ಕಾರ ನೀಡುವುದಾಗಿ ಸಚಿವ ಡಾ. ಕೆ. ಸಿ. ನಾರಾಯಣಗೌಡ ಅವರು ಘೋಷಿಸಿದ್ದಾರೆ.
State government announces Rs 5 lakh to Priya Mohan who was part of Indian Mixed Relay team that won silver at U-20 World Athletics Championship. Congratulations#WorldU20 #Athletics
— Dr. Narayana Gowda / ಡಾ.ನಾರಾಯಣ ಗೌಡ (@narayanagowdakc) August 3, 2022
1/2 pic.twitter.com/VPDsdTYk7n