CWG 2022: 6ನೇ ದಿನ ಭಾರತಕ್ಕೆ 5 ಪದಕ: ಕಂಚು ಗೆದ್ದು ತೇಜಸ್ವಿನ್ ಶಂಕರ್, ಗುರುದೀಪ್ ಸಿಂಗ್ ಇತಿಹಾಸ ನಿರ್ಮಾಣ
ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಅಥ್ಲೀಟ್ ತೇಜಸ್ವಿನ್ ಶಂಕರ್ ಪುರುಷರ ಹೈಜಂಪ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ.
Published: 04th August 2022 03:30 PM | Last Updated: 04th August 2022 04:02 PM | A+A A-

ತೇಜಸ್ವಿನ್-ಶಂಕರ್-ಗುರುದೀಪ್ ಸಿಂಗ್
ಬರ್ಮಿಂಗ್ ಹ್ಯಾಮ್: ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಅಥ್ಲೀಟ್ ತೇಜಸ್ವಿನ್ ಶಂಕರ್ ಪುರುಷರ ಹೈಜಂಪ್ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ತೇಜಸ್ವಿನ್ ಶಂಕರ್ ಹೈಜಂಪ್ ವಿಭಾಗದಲ್ಲಿ 2.22 ಮೀ ಜಿಗಿದು ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮೊದಲ ಪದಕ ತಂದುಕೊಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇನ್ನು 109 ಕೆಜಿ ವಿಭಾಗದ ಪುರುಷರ ಭಾರ ಎತ್ತುವ ಸ್ಪರ್ಧೆಯಲ್ಲಿ ಗುರುದೀಪ್ ಸಿಂಗ್ ಕಂಚಿನ ಪದಕ ಗೆದ್ದಿದ್ದಾರೆ.
ಮೊದಲ ಹಂತದಲ್ಲಿ 2.10 ಮೀಟರ್ ಜಿಗಿತದೊಂದಿಗೆ ಉತ್ತಮ ಆರಂಭ ಕಂಡ ಅವರಿಗೆ ಎದುರಾಳಿ ಬಹಾಮಾಸ್‌ನ ಡೊನಾಲ್ಡ್ ಥಾಮಸ್ ಮತ್ತು ಇಂಗ್ಲೆಂಡ್‌ನ ಜೋಯಲ್ ಕ್ಲಾರ್ಕ್-ಖಾನ್ ಕೂಡ 2.22 ಮೀಟರ್ ಜಿಗಿದು ಸ್ಪರ್ಧೆಯೊಡ್ಡಿದರು.
ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್: ಭಾರತಕ್ಕೆ ಮತ್ತೊಂದು ಪದಕ; ಜೂಡೋದಲ್ಲಿ ಬೆಳ್ಳಿ ಗೆದ್ದ ತುಲಿಕಾ ಮಾನ್
ಆದರೆ ಭಾರತದ ತೇಜಸ್ವಿನ್ ಶಂಕರ್ ಕೆಲವು ತಪ್ಪುಗಳ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈ ಮೂಲಕ ಭಾರತದ ಪದಕಗಳ ಸಂಖ್ಯೆ 18ಕ್ಕೆ ಏರಿದೆ.
ಗಣ್ಯರ ಶುಭಾಶಯ:
ಕಾಮನ್‌ವೆಲ್ತ್ ಗೇಮ್ಸ್ ಫಾರ್ ಇಂಡಿಯಾದಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ. ತೇಜಸ್ವಿನ್ ಶಂಕರ್ ಅವರು ಬರ್ಮಿಂಗ್ಹ್ಯಾಮ್ 2022 ರಲ್ಲಿ ಹೈಜಂಪ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದ ಮೊದಲಿಗರಾಗಿದ್ದಾರೆ.
ಹೈಜಂಪ್ ವಿಭಾಗದಲ್ಲಿ ಪದಕ ಗೆಲ್ಲುವುದು ಬಹಳ ಅಪರೂಪ ಆದರೆ ತೇಜಸ್ವಿನ್ ಶಂಕರ್ ಬರ್ಮಿಂಗ್ಹ್ಯಾಮ್ 2022 ನಲ್ಲಿ 2.22 ಮೀಟರ್‌ಗಳಷ್ಟು ಜಿಗಿತದೊಂದಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಎಹೈಜಂಪ್ ವಿಭಾಗದಲ್ಲಿ ಪದಕವನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ.
ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್ 2022: ಭಾರತಕ್ಕೆ ಮತ್ತೊಂದು ಪದಕ; ಸ್ಕ್ವಾಷ್ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್
ಕಾಮನ್‌ವೆಲ್ತ್ ಗೇಮ್ಸ್2022 ರಲ್ಲಿ ಟೀಮ್ ಇಂಡಿಯಾಕ್ಕೆ ಹೈ ಜಂಪ್‌ನಲ್ಲಿ ಬಂದ ಮೊದಲ ಪದಕ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ, ತೇಜಸ್ವಿನ್ ಶಂಕರ್ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಪುರುಷರ ಹೈಜಂಪ್‌ನಲ್ಲಿ ಕಂಚಿನ ಪದಕವನ್ನು ಪಡೆದರು.
ಭಾರತದ ಒಟ್ಟಾರೆ ಪದಕದ ಸಂಖ್ಯೆ 18ಕ್ಕೇರಿದ್ದು 5 ಚಿನ್ನ, 6 ಬೆಳ್ಳಿ ಮತ್ತು 8 ಕಂಚು ಸೇರಿದೆ.