ಕಾಮನ್ ವೆಲ್ತ್ ಗೇಮ್ಸ್ 2022: ಮುಂದುವರೆದ ಭಾರತೀಯ ಅಥ್ಲೀಟ್ ಗಳ ಪದಕ ಬೇಟೆ; ಮತ್ತೆ 4 ಪದಕ
ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಭಾರತದ ತೆಕ್ಕೆಗೆ ಮತ್ತೆ 4 ಪದಗಳ ಸೇರಿಕೊಂಡಿವೆ.
ಹೌದು.. ಇಂದು ಮಧ್ಯಾಹ್ನದ ಹೊತ್ತಿಗೆ ಬಾಕ್ಸಿಂಗ್ ನಲ್ಲಿ ಎರಡು ಚಿನ್ನದ ಪದಕ ಬಂದಿದೆ. ಬಾಕ್ಸರ್ ನಿತು ಘಂಘಾಸ್ ಮತ್ತು ಅಮಿತ್ ಪಂಘಾಲ್ ಚಿನ್ನದ ಪದಕ ಗೆದ್ದಿದ್ದರೆ 16 ವರ್ಷಗಳ ಬಳಿಕ ಭಾರತೀಯ ಮಹಿಳಾ ಹಾಕಿ ತಂಡ ಕಂಚಿನ ಪದಕ ಗೆದ್ದಿದೆ. 48 ಕೆಜಿ ವಿಭಾಗದ ಮಹಿಳೆಯ ಬಾಕ್ಸಿಂಗ್ ನಲ್ಲಿ ನಿತು ಘಂಘಾಸ್ ಇಂಗ್ಲೆಂಡ್ ನ ಡೆಮಿ-ಜೇಡ್ ರೆಸ್ಟನ್ ರನ್ನು ಸೋಲಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. 51 ಕೆಜಿ ವಿಭಾಗದ ಪುರುಷರ ಬಾಕ್ಸಿಂಗ್ ನಲ್ಲಿ ಅಮಿತ್ ಪಂಘಾಲ್ ಇಂಗ್ಲೆಂಡ್ ತಂಡದ ಕೀರನ್ ಮ್ಯಾಕ್ಡೊನಾಲ್ಡ್ ರನ್ನು ಸೋಲಿಸಿ ಚಿನ್ನ ಗೆದ್ದಿದ್ದರು.
ಇತ್ತ ಭಾರತದ ಮಹಿಳಾ ಹಾಕಿ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿ ಕಂಚು ಗೆದಿದ್ದು, ಪೆನಾಲ್ಟಿ ಶೂಟೌಟ್ ನಲ್ಲಿ 2-1 ಅಂತರದ ಗೋಲುಗಳನ್ನು ಹೊಡೆಯುವ ಮೂಲಕ ಹಾಕಿ ಪದಕ ಗೆದ್ದಿದೆ.
ಮತ್ತೆ 4 ಪದಕ
ಇದರ ಬೆನ್ನಲ್ಲೇ ಭಾರತ ತಂಡ ಮತ್ತೆ 4 ಪದಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಮಹಿಳೆಯರ ಜಾವೆಲಿನ್ ಥ್ರೋ ವಿಭಾಗದಲ್ಲಿ ಅನ್ನು ರಾಣಿ ಕಂಚಿನ ಪದಕ ಗೆದ್ದಿದ್ದರೆ, 10 ಸಾವಿರ ಮೀ. ರೇಸ್ ವಾಕ್ ನಲ್ಲಿ ಭಾರತದ ಸಂದೀಪ್ ಕುಮಾರ್ ಕಂಚಿನ ಪದಕ ಜಯಿಸಿದ್ದಾರೆ. ಇನ್ನು ಪುರುಷರ ಟ್ರಿಪಲ್ ಜಂಪ್ ನಲ್ಲಿ ಭಾರತದ ಎಲ್ಡೋಸ್ ಪಾಲ್ ಚಿನ್ನ ಗೆದ್ದರೆ ಮತ್ತು ಅಬ್ದುಲ್ಲಾ ಅಬೂಬಕ್ಕರ್ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ